ಕೇಕ್ ತಿಂದು ಮಕ್ಕಳು ಅಸ್ವಸ್ಥ

Crime
Crime
Published on

ಕಾಸರಗೋಡು: ಹೊಸದುರ್ಗ ಪರಪ್ಪದಲ್ಲಿ ಮದುವೆ ವಾರ್ಷಿಕೋತ್ಸವ ಸಂಭ್ರಮಾಚರಣೆಗಾಗಿ ಖರೀದಿಸಿದ ಕೇಕ್ ತಿಂದು ಆರು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಹೊಸದುರ್ಗ ತಾಲೂಕಿನ ಕಿನ್ನಾನೂರ್ ಕರಿಂದಳಂ ಕನಕಪಳ್ಳಿ ನಿವಾಸಿ ಸಲೀಂ ಎಂಬುವರ ವಿವಾಹ ವಾರ್ಷಿಕ ಸಂದರ್ಭ ಸಮೀಪದ ಬೇಕರಿಯೊಂದರಿಂದ ಕೇಕ್ ಖರೀದಿಸಲಾಗಿತ್ತು. ಇದನ್ನು ತಿಂದ ನಂತರ ಮಕ್ಕಳು ಅಸ್ವಸ್ಥರಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಮಾಹಿತಿ ಪಡೆದ ಆರೋಗ್ಯ ಇಲಾಖೆ ಅಧಿಕಾರಿಗಳು ಬೇಕರಿಗೆ ದಾಳಿ ನಡೆಸಿ ಪರಿಶೀಲಿಸಿದಾಗ ಕೇಕ್‌ನಲ್ಲಿ ಫಂಗಸ್ ಕಂಡುಬಂದಿದ್ದು, ಇತರ ಹಳಸಿದ ಆಹಾರವನ್ನೂ ಪತ್ತೆಹಚ್ಚಿದ್ದಾರೆ. ಈ ನಿಟ್ಟಿನಲ್ಲಿ ಬೇಕರಿಯನ್ನು ತಾತ್ಕಾಲಿಕವಾಗಿ ಮುಚ್ಚಿಸಿ ನೋಟಿಸ್ ಜಾರಿಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net