ಕೀರ್ತನಾ ಮೃತ ಮಗು. ಕಿನ್ನಿಮೂಲ್ಕಿ ನಿವಾಸಿ ನಯನಾ ಕರ್ಕಡ ಎಂಬವರು ಮಗುವನ್ನು ಎತ್ತಿಕೊಂಡು ಮನೆ ಸಮೀಪದ ಬಾವಿಕಟ್ಟೆಯಲ್ಲಿ ಮಗುವನ್ನು ಕಂಕುಳದಲ್ಲಿ ಇಟ್ಟುಕೊಂಡು ಬಕೆಟ್ನಲ್ಲಿ ನೀರು ತೆಗೆಯುತ್ತಿದ್ದರು. ಈ ವೇಳೆ ನಾಯಿ ಬೊಗಳಿದ್ದು, ಇದರಿಂದ ಗಾಬರಿಗೊಂಡ ಮಗು ಕೊಸರಾಡಿ ಆಯತಪ್ಪಿ ಬಾವಿಗೆ ಬಿದ್ದಿದೆ. ತಕ್ಷಣ ನಯನ ಅವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಅದಾಗಲೇ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.