ಲಕ್ಷ್ಮೀ ವೆಂಕಟೇಶ ದೇವರ ಚಾತುರ್ಮಾಸ್ಯ ಸಂಪ್ರೋಕ್ಷಣೆ

ಉಡುಪಿ ತೆಂಕಪೇಟೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ದೇವರ ಚಾತುರ್ಮಾಸ್ಯ ಸಂಪ್ರೋಕ್ಷಣೆ ನಿಮಿತ್ತ ಪಂಚಾಮೃತ ಅಭಿಷೇಕ ಹಾಗೂ ಪರ್ತಗಾಳಿ ಮಠದ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಅವರ ಪಂಚಮ ಪುಣ್ಯತಿಥಿ ನಡೆಯಿತು.
ಉಡುಪಿ ತೆಂಕಪೇಟೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ದೇವರ ಚಾತುರ್ಮಾಸ್ಯ ಸಂಪ್ರೋಕ್ಷಣೆ ನಿಮಿತ್ತ ಪಂಚಾಮೃತ ಅಭಿಷೇಕ ಹಾಗೂ ಪರ್ತಗಾಳಿ ಮಠದ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಅವರ ಪಂಚಮ ಪುಣ್ಯತಿಥಿ ನಡೆಯಿತು.
Published on

* ವಿದ್ಯಾಧಿರಾಜ ತೀರ್ಥ ಶ್ರೀಪಾದರ ಪುಣ್ಯತಿಥಿ

ಉಡುಪಿ: ತೆಂಕಪೇಟೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ದೇವರ ಚಾತುರ್ಮಾಸ್ಯ ಸಂಪ್ರೋಕ್ಷಣೆ ನಿಮಿತ್ತ ಶುಕ್ರವಾರ (ಜು.24) ಪಂಚಾಮೃತ ಅಭಿಷೇಕ, ಶತ ಕಲಶಾಭಿಷೇಕ, ಸಾನ್ನಿಧ್ಯ ಹವನ, ವಿಶೇಷ ಅಲಂಕಾರ, ಅಷ್ಟಮಂಗಲ ನಿರೀಕ್ಷಣೆ, ಪಟ್ಟ ಕಾಣಿಕೆ, ಸೇವಾದಾರರಿಗೆ ಪ್ರಸಾದ ವಿತರಣೆ ನಡೆಯಿತು.
ಇದೇ ಸಂದರ್ಭದಲ್ಲಿ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್​ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಪಂಚಮ ಪುಣ್ಯತಿಥಿ ಆರಾಧನೆಯೂ ಜರುಗಿತು. ಶ್ರೀದೇವರಿಗೆ ಮಹಾಪೂಜೆಯ ಬಳಿಕ ಸಮಾರಾಧನೆ ನೆರವೇರಿತು. 
ದೇವಳದ ಅರ್ಚಕರಾದ ವಿನಾಯಕ ಭಟ್​, ದಯಾಘನ ಭಟ್​, ರವೀಂದ್ರ ಭಟ್​, ಶರತ್​ ಭಟ್​ ಮಲ್ಪೆ, ವಿದ್ವಾನ್​ ಹರಿಪ್ರಸಾದ್​ ಶರ್ಮ, ರಮೇಶ ಭಟ್​, ದೀಪಕ್​ ಭಟ್​, ಲಕ್ಷೀನಾರಾಯಣ ಭಟ್​ ಧಾರ್ಮಿಕ ಪೂಜಾ ವಿಧಾನ ನಡೆಸಿಕೊಟ್ಟರು. ಗಿರೀಶ್​ ಭಟ್​, ಸುರೇಶ ಭಟ್​, ಪ್ರಸನ್ನ ಭಟ್​ ಸಹಕರಿಸಿದರು.
ದೇವಳದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ್​ ನಾಯಕ್​, ಆಡಳಿತ ಮಂಡಳಿಯ ಸದಸ್ಯರು, ಸ್ವಯಂ ಸೇವಕರು, ಜಿಎಸ್​ಬಿ ಯುವಕ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net