ಚರಣ್ ಶೆಟ್ಟಿ ಕಾರ್ಯ ಅಭಿನಂದನೀಯ

 ಕೊಜಪಾಡಿ ಬಾಳಿಕೆ ಜಯ ಶೆಟ್ಟಿಯವರ ಸ್ಮರಣಾರ್ಥ ಪುತ್ರ ಚರಣ್ ಜೆ.ಶೆಟ್ಟಿ ಪಕ್ಷಿಕೆರೆ ಪೇಟೆಯಲ್ಲಿ ನಿರ್ಮಿಸಿದ ಬಸ್ ತಂಗುದಾಣ ಉದ್ಘಾಟಿಸಲಾಯಿತು. ಪ್ರಮುಖರಾದ ಅನಂತಪದ್ಮನಾಭ ಆಸ್ರಣ್ಣ, ವೆಂಕಟರಾಜ ಉಡುಪ, ವಿಶ್ವೇಶ ಭಟ್ ಮೊದಲಾದವರಿದ್ದರು.
ಕೊಜಪಾಡಿ ಬಾಳಿಕೆ ಜಯ ಶೆಟ್ಟಿಯವರ ಸ್ಮರಣಾರ್ಥ ಪುತ್ರ ಚರಣ್ ಜೆ.ಶೆಟ್ಟಿ ಪಕ್ಷಿಕೆರೆ ಪೇಟೆಯಲ್ಲಿ ನಿರ್ಮಿಸಿದ ಬಸ್ ತಂಗುದಾಣ ಉದ್ಘಾಟಿಸಲಾಯಿತು. ಪ್ರಮುಖರಾದ ಅನಂತಪದ್ಮನಾಭ ಆಸ್ರಣ್ಣ, ವೆಂಕಟರಾಜ ಉಡುಪ, ವಿಶ್ವೇಶ ಭಟ್ ಮೊದಲಾದವರಿದ್ದರು.
Published on
ಕಿನ್ನಿಗೋಳಿ: ಪ್ರಯಾಣಿಕರಿಗೆ ಮಳೆ, ಬಿಸಿಗೆ ಅನೂಕೂಲವಾಗುವಂತೆ ಬಸ್ ತಂಗುದಾಣ ನಿರ್ಮಿಸಿಕೊಟ್ಟ ಚರಣ್ ಶೆಟ್ಟಿ ಕಾರ್ಯ ಅಭಿನಂದನೀಯ. ಅವರಿಂದ ಇಂತಹ ನೂರಾರು ಸಾಮಾಜಿಕ ಕಾರ್ಯಗಳು ನಡೆಯಲಿ ಎಂದು ಕಟೀಲು ದೇವಳ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಕೊಜಪಾಡಿ ಬಾಳಿಕೆ ಜಯ ಶೆಟ್ಟಿಯವರ ಸ್ಮರಣಾರ್ಥ ಪುತ್ರ ಚರಣ್ ಜೆ.ಶೆಟ್ಟಿ ಪಕ್ಷಿಕೆರೆ ಪೇಟೆಯಲ್ಲಿ ನಿರ್ಮಿಸಿದ ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿದರು.
ಅತ್ತೂರು ಬೈಲು ಮಹಾಗಣಪತಿ ಮಂದಿರ ಪ್ರಧಾನ ಅರ್ಚಕ ವೆಂಕಟರಾಜ ಉಡುಪ, ಸುರಗಿರಿ ದೇವಳ ಪ್ರಧಾನ ಅರ್ಚಕ ವಿಶ್ವೇಶ ಭಟ್, ಪಕ್ಷಕೆರೆ ಸಂತ ಜೂದರ ಇಗರ್ಜಿ ಸಹಾಯಕ ಧರ್ಮಗುರು ಲಿಯೊ ವೇಗಸ್, ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ನೂರಾಣಿಯ, ಶ್ರೀ ಕ್ಷೇತ್ರ ಸುರಗಿರಿ ಮೊಕ್ತೇಸರ ಜಗನ್ನಾಥ್ ಶೆಟ್ಟಿ ಮಮ್ಮೆಟ್ಟು, ಕೆಮ್ರಾಲ್ ಗ್ರಾಪಂ ಮಾಜಿ ಅಧ್ಯಕ್ಷ ಮಯ್ಯದ್ದಿ, ಪಕ್ಷಕೆರೆ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣಪತಿ ಆಚಾರ್ಯ, ಇಬ್ರಾಹಿಂ ಸಾಹೇಬ ಪಕ್ಷಿಕೆರೆ, ಅಮೀದ್ ಸಾಹೇಬ ಪಕ್ಷಿಕೆರೆ, ಪಕ್ಷಿಕೆರೆ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘ ಅಧ್ಯಕ್ಷ ಜಗದೀಶ್, ಅತೂರು ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಜಯರಾಮ ಆಚಾರ್ಯ, ರತ್ನಾವತಿ ಜಯಶೆಟ್ಟಿ ಕುಳಾಯಿಗುತ್ತು, ಚರಣ್ ಜೆ.ಶೆಟ್ಟಿ ಕುಳಾಯಿಗುತ್ತು ಮತ್ತಿತರರು ಉಪಸ್ಥಿತರಿದ್ದರು. ಚರಣ್ ಶೆಟ್ಟಿ ಕುಳಾಯಿಗುತ್ತು ಪ್ರಸ್ತಾವನೆಗೈದರು. ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net