ಕಾಪು ದೇವಸ್ಥಾನದಲ್ಲಿ ಚಂಡಿಕಾಯಾಗ, ಘಂಟಾನಾದ ಸೇವೆ ಸಂಪನ್ನ

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದಲ್ಲಿ ನಡೆದ ಕುಣಿತ ಭಜನೆ ಸ್ಪರ್ಧೆ ವಿಜೇತ ಕುಳಾಯಿ ಬಾಲವಿಕಾಸ ಭಜನಾ ಮಂಡಳಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ರತ್ನಾಕರ ಶೆಟ್ಟಿ, ವಾಸುದೇವ ಶೆಟ್ಟಿ, ಉದಯ ಸುಂದರ ಶೆಟ್ಟಿ, ಭಾಸ್ಕರ ಶೆಟ್ಟಿ ಮತ್ತಿತರರಿದ್ದರು.
ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದಲ್ಲಿ ನಡೆದ ಕುಣಿತ ಭಜನೆ ಸ್ಪರ್ಧೆ ವಿಜೇತ ಕುಳಾಯಿ ಬಾಲವಿಕಾಸ ಭಜನಾ ಮಂಡಳಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ರತ್ನಾಕರ ಶೆಟ್ಟಿ, ವಾಸುದೇವ ಶೆಟ್ಟಿ, ಉದಯ ಸುಂದರ ಶೆಟ್ಟಿ, ಭಾಸ್ಕರ ಶೆಟ್ಟಿ ಮತ್ತಿತರರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವದ ಆರನೇ ದಿನ ಶುಕ್ರವಾರ ಮಾತೃ ವೈಭವ ಸೇವಾ ಸಮಿತಿ ಮುಂಬೈ ವಲಯದ ಪರವಾಗಿ ಚಂಡಿಕಾಯಾಗ, ಘಂಟಾನಾದ ಸೇವೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.

ಮಾತೃ ವೈಭವ ಸೇವಾ ಸಮಿತಿ ಉಪಾಧ್ಯಕ್ಷ ಉದಯ ಸುಂದರ್ ಶೆಟ್ಟಿ ನೇತೃತ್ವದಲ್ಲಿ ಮುಂಬೈ ಸಮಿತಿ ಸದಸ್ಯರು ಮತ್ತು ಮುಂಬೈನ ಅಮ್ಮನ ಭಕ್ತರ ಪರವಾಗಿ ಸೇವೆ ನೆರವೇರಿಸಲಾಯಿತು.

ಬಹುಮಾನ ವಿತರಣೆ ಸವಾರಂಭದಲ್ಲಿ ದೇವಳ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ.ಕುವಾರಗುರು ತಂತ್ರಿ ಆಶೀರ್ವಚನ ನೀಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಮಾತೃ ವೈಭವ ಸೇವಾ ಸಮಿತಿ ಮುಂಬೈ ವಲಯದ ನವಿಮುಂಬೈ ಘಟಕದ ಮುಖ್ಯ ಸಂಚಾಲಕ ಖಾಂದೇಶ್ ಭಾಸ್ಕರ್ ಶೆಟ್ಟಿ, ಮಂಗಳೂರು ಮೀನುಗಾರಿಕಾ ಅಭಿವೃದ್ಧಿ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಆಡಳಿತ ನಿರ್ದೇಶಕ ಜಿ.ಸಂತೋಷ್ ಕುವಾರ್, ಡಾ.ಹೇಮಲತಾ ಹಾಗೂ ಕುಣಿತ ಭಜನಾ ನಿರ್ವಾಹಕರಾದ ರಮೇಶ್ ಕಲ್ಮಾಡಿ, ಸಾವಿತ್ರಿ ಗಣೇಶ್, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ರೇಣುಕಾ ಜೋಗಿ ಉಪಸ್ಥಿತರಿದ್ದರು.

ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಸ್ವಾಗತಿಸಿದರು. ಶಿವಣ್ಣ ಬಾಯರ್ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್.ಪಾಲನ್ ವಂದಿಸಿದರು.

ಕುಣಿತ ಭಜನಾ ಸ್ಪರ್ಧೆ ಬಹುಮಾನ

ರಾಜ್ಯಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆ ಆಯೋಜಿಸಲಾಗಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 15 ತಂಡಗಳು ಭಾಗವಹಿಸಿದ್ದವು. ಹೊಸಬೆಟ್ಟು ಕುಳಾಯಿ ಬಾಲ ವಿಕಾಸ ಕುಣಿತ ಭಜನಾ ಮಂಡಳಿ ಪ್ರಥಮ, ಉಜಿರೆ ಶ್ರೀ ಜನಾರ್ದನ ಸ್ವಾಮಿ ಕುಣಿತ ಭಜನಾ ಮಂಡಳಿ ದ್ವಿತೀಯ, ಪೊಳಲಿ ಕಾಂಜಲಕೋಡಿ ಈಶ್ವರಿ ಭಜನಾ ಮಂಡಳಿ ತೃತೀಯ ಹಾಗೂ ಬೈಕಂಪಾಡಿ ಶ್ರೀ ಶೇಷಶಯನ ಭಜನಾ ತಂಡ ಚತುರ್ಥ ಬಹುಮಾನ ಪಡೆಯಿತು. ಉದಯ ಸಂದರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net