ಹವ್ಯಕ ಸಭಾ (ರಿ.) ಉಡುಪಿಯ ಅಧ್ಯಕ್ಷರಾಗಿ ನೇಮಕಗೊಂಡ ಸಿ.ಎಚ್. ಸುಬ್ರಹ್ಮಣ್ಯ ಭಟ್ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ನಟೇಶ್ ವೈ.ಆರ್.
Published on:
Copied
Follow Us
* ವಾರ್ಷಿಕ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ
* ಕಾರ್ಯದರ್ಶಿಯಾಗಿ ನಟೇಶ್ ವೈ.ಆರ್. ನೇಮಕ
ಉಡುಪಿ: ಹವ್ಯಕ ಸಭಾ (ರಿ.) ಉಡುಪಿಯ 2026-27ನೇ ಸಾಲಿನ ಅಧ್ಯಕ್ಷರಾಗಿ ಶಿಕ್ಷಣತಜ್ಞ ಸಿ.ಎಚ್. ಸುಬ್ರಹ್ಮಣ್ಯ ಭಟ್ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಡಾ. ಮಹಾದೇವ ಭಟ್ ಹಾಗೂ ಶ್ವೇತಾ ಹೆಗಡೆ, ಕಾರ್ಯದರ್ಶಿಯಾಗಿ ನಟೇಶ್ ವೈ.ಆರ್. ನೇಮಕಗೊಂಡಿದ್ದಾರೆ.
ಉಡುಪಿ ಪೆರಂಪಳ್ಳಿಯ ಹವ್ಯಕ ಧಾಮದಲ್ಲಿ ಸಭಾದ ಅಧ್ಯಕ್ಷ ಪ್ರೊಫೆಸರ್ ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಸಭಾದ 30ನೇ ವಾರ್ಷಿಕ ಮಹಾಸಭೆಯಲ್ಲಿ ಒಟ್ಟು 23 ಸದಸ್ಯರನ್ನೊಳಗೊಂಡ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಸಹ -ಕಾರ್ಯದರ್ಶಿಗಳಾಗಿ ಡಾ. ಜಯಶಂಕರ್ ಕಂಗಣ್ಣಾರು, ಲಕ್ಷ್ಮೀ ಹೆಗಡೆ, ಕೋಶಾಧಿಕಾರಿಯಾಗಿ ಅರವಿಂದಕುಮಾರ್ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಪ್ರೊ. ಕೆ.ಸದಾಶಿವ್ ರಾವ್ ಆಯ್ಕೆಯಾದರು.
ನಿಕಟಪೂರ್ವ ಕಾರ್ಯದರ್ಶಿ ಪ್ರಸನ್ನ ಅಡಿಗ ಅವರು ಈವರಗೆ ಕೈಗೊಂಡ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು. ಕೋಶಾಧಿಕಾರಿ ಗಿರೀಶ್ ಕೆ.ಎನ್. ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. ಉಡುಪಿ ಜಿಲ್ಲೆಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹವ್ಯಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಮಂಜುನಾಥ್ ಭಟ್ ಬೈಲಾರ ಮತ್ತು ಬಳಗದವರಿಂದ ವೇದಘೋಷ ನಡೆಯಿತು. ಆದ್ಯಾ ಹಾಗೂ ಆರಾಧ್ಯ ಪ್ರಾರ್ಥಿಸಿದರು. ಎಚ್.ಎನ್. ವೆಂಕಟೇಶ್ ಸ್ವಾಗತಿಸಿದರು. ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ರುದ್ರ ಪಠಣ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು.