ಸಿಆರ್ಜಡ್ ಅಧಿಸೂಚನೆ 2019 ರ ಅಡಿಯಲ್ಲಿ ಪೂರ್ವಭಾವಿ ಅನುಮತಿ ಪಡೆಯುವ ಷರತ್ತಿಗೆ ಒಳಪಟ್ಟು ಸಿಆರ್ಜಡ್-2 ಮತ್ತು ಸಿಆರ್ಜಡ್-4 ಪ್ರದೇಶಗಳ ಮರಳಿನ ದಿಬ್ಬ ತೆಗೆದು ಹಾಕಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, 2022ರ ನ.24ರ ತಿದ್ದುಪಡಿ ಅಧಿಸೂಚನೆ ಸಂಖ್ಯೆ 5495-ಇ ಸಿಆರ್ಜಡ್ ಅಧಿಸೂಚನೆಯಂತೆ ದ್ವೀಪ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ 2019ರ ಅಡಿಯಲ್ಲಿಯೂ ಯಾಂತ್ರಿಕವಲ್ಲದ ಸಾಂಪ್ರದಾಯಿಕ, ಯಾಂತ್ರಿಕವಲ್ಲದ ಕೈ ಕೆಲಸದ ವಿಧಾನಗಳ ಮೂಲಕ ಮರಳಿನ ದಿಬ್ಬ ತೆಗೆಯಲು ಸಚಿವಾಲಯ ಅನುಮತಿ ನೀಡಿದೆ.