ಮನೆ ನಿರ್ಮಾಣಕ್ಕೆ ಸಿಮೆಂಟ್ ಶೀಟ್ ಹಸ್ತಾಂತರ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಾವು ಘಟಕದ ವತಿಯಿಂದ ಮಾಡ್ನೂರು ಗ್ರಾಮದ ಕುಡುಪುನಡ್ಕದಲ್ಲಿ ಸಿಮೆಂಟ್ ಶೀಟ್ ಹಸ್ತಾಂತರಿಸಲಾಯಿತು. ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಟ್ರಸ್ಟ್ ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲ್, ಪ್ರಜ್ವಲ್ ಘಾಟೆ ಮೊದಲಾದವರಿದ್ದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಾವು ಘಟಕದ ವತಿಯಿಂದ ಮಾಡ್ನೂರು ಗ್ರಾಮದ ಕುಡುಪುನಡ್ಕದಲ್ಲಿ ಸಿಮೆಂಟ್ ಶೀಟ್ ಹಸ್ತಾಂತರಿಸಲಾಯಿತು. ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಟ್ರಸ್ಟ್ ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲ್, ಪ್ರಜ್ವಲ್ ಘಾಟೆ ಮೊದಲಾದವರಿದ್ದರು.
Published on
ಪುತ್ತೂರು ಗ್ರಾಮಾಂತರ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಾವು ಘಟಕದ ವತಿಯಿಂದ ಮಾಡ್ನೂರು ಗ್ರಾಮದ ಕುಡುಪುನಡ್ಕದಲ್ಲಿ ವಾಸ್ತವ್ಯವಿರುವ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಸಿಮೆಂಟ್ ಶೀಟ್ ಒದಗಿಸುವ ಮೂಲಕ ಮಾನವೀಯ ನೆರವು ನೀಡಲಾಗಿದೆ.
ಮಾಡ್ನೂರು ಗ್ರಾಮದ ಕುಡುಪುನಡ್ಕದ ರಾಜೇಶ್ ಎಂಬುವರ ಕುಟುಂಬ ಟರ್ಪಾಲ್ ಹೊದಿಕೆಯ ಜೋಪಡಿಯಲ್ಲಿ ವಾಸ್ತವ್ಯ ಇರುವುದನ್ನು ಹಾಗೂ ಅವರ ಕುಟುಂಬ ಎದುರಿಸುತ್ತಿದ್ದ ಆರ್ಥಿಕ ಸಮಸ್ಯೆಯನ್ನು ಮನಗಂಡ ಪುತ್ತಿಲ ಪರಿವಾರದ ಕಾವು ಘಟಕದ ಪದಾಧಿಕಾರಿಗಳು ಅವರಿಗೆ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಸಿಮೆಂಟ್ ಶೀಟುಗಳನ್ನು ಒದಗಿಸುವ ನಿರ್ಧಾರ ಕೈಗೊಂಡು, ಟ್ರಸ್ಟ್ ವತಿಯಿಂದ ಹಸ್ತಾಂತರಿಸಿದ್ದಾರೆ.
ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಟ್ರಸ್ಟ್ ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲ್, ಪ್ರಜ್ವಲ್ ಘಾಟೆ, ಸುನೀಲ್ ಬೋರ್ಕರ್, ಪದ್ಮನಾಭ ಅರಿಯಡ್ಕ, ಕಾವು ಘಟಕದ ಹರೀಶ್ ಕುಂಜತ್ತಾಯ, ಯೋಗೀಶ್ ಕಾವು, ರವಿಪ್ರಸಾದ್ ರೈ, ಅಮೃತಲಿಂಗಂ, ರಾಜೇಶ್ ಸೀಮುಂಜ, ರವಿಕಿರಣ್, ನಿರಂಜನ್, ಪುನೀತ್ ಕೆರೆಮಾರ್, ಯೋಗೀಶ್ ಸರೋಳ್ತಡಿ, ರವಿಚಂದ್ರ ಮಾಣಿಯಡ್ಕ, ಸುಧೀಂದ್ರ, ಅಖಿಲೇಶ್, ಕಮಲಾಕ್ಷ ಮಾಣಿಯಡ್ಕ, ಜಯಂತ ಕೆರೆಮಾರ್, ಗಣೇಶ್ ಪೂವಂದೂರು, ಗಣೇಶ್ ಅಮ್ಚಿನಡ್ಕ, ಧನಂಜಯ ಅಮ್ಚಿನಡ್ಕ, ಚಿದಾನಂದ ಆಚಾರ್ಯ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net