ಕೋರ್ಸ್ ಆಯ್ಕೆ ವೇಳೆ ಜಾಗರೂಕತೆ ಅಗತ್ಯ

 ಕುಂದಾಪುರ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಆಯ್ಕೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ಕುಂದಾಪುರ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಆಯ್ಕೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಶೈಕ್ಷಣಿಕ ಅವಧಿಯಲ್ಲೇ ಕಠಿಣವಾಗಿ ಪರಿಶ್ರಮಿಸಿದರೆ ಗುರಿಯನ್ನು ವೇಗವಾಗಿ ತಲುಪಬಹುದು. ವಿದ್ಯಯಾರ್ಥಿಗಳು ಪಿಯುಸಿ ಬಳಿಕ ಕೋರ್ಸ್ ಆಯ್ದುಕೊಳ್ಳುವಲ್ಲಿ ಜಾಗರೂಕತೆ ವಹಿಸಬೇಕು ಎಂದು ಮೂಡುಬಿದಿರೆ ಎಂಐಟಿಇ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಮೊಗವೀರ ಅಭಿಪ್ರಾಯಪಟ್ಟರು.
ಕುಂದಾಪುರ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವೃತ್ತಿಪರ ಕೋರ್ಸ್ ಆಯ್ಕೆ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಜ್ಞಾನದ ಜತೆಯಲ್ಲಿ ಕೌಶಲ ಅಳವಡಿಸಿಕೊಂಡರೆ ಮಾತ್ರ ಉತ್ತಮ ಉದ್ಯೋಗ ಪಡೆದುಕೊಳ್ಳಲು ಸಾಧ್ಯ. ಇಂಜಿನಿಯರಿಂಗ್ ಕೋರ್ಸ್ ಆಯ್ದುಕೊಂಡವರು ಪ್ರಪಂಚದ ಯಾವ ಭಾಗದಲ್ಲಾದರೂ ಉದ್ಯೋಗ ಪಡೆಯಬಲ್ಲರು. ಕೋರ್ಸ್ ಆಯ್ಕೆ ಜತೆಗೆ ನಿರ್ದಿಷ್ಟ ಕಾಲೇಜನ್ನೂ ಆಯ್ಕೆಮಾಡುವುದು ಪ್ರಮುಖ ಮಾನದಂಡವಾಗಲಿದೆ ಎಂದರು.
ಎಂಐಟಿಇ ಮೆಕ್ಯಾನಿಕಲ್ ಇಂಜಿನಿಯರ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಂಕರ್ ಉಪಸ್ಥಿತರಿದ್ದರು. ಪಿಯು ಕಾಲೇಜು ಉಪನ್ಯಾಸಕಿ ದಿವ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಉದ್ಯೋಗ ಪಡೆಯುವಲ್ಲಿ ಕಾರ್ಯದಕ್ಷತೆ, ಕಮಾಂಡಿಂಗ್, ಸಂವಹನ ಶೈಲಿ ಮುಖ್ಯವಾಗಿರುತ್ತದೆ. ಸಮಸ್ಯೆ ಪರಿಹರಿಸಿಕೊಳ್ಳುವ ಮಾರ್ಗ, ವಿಮರ್ಶಾತ್ಮಕ ಚಿಂತನೆ, ತಾಂತ್ರಿಕ ಜ್ಞಾನ, ಸೃಜನಶೀಲತೆ, ನಾಯಕತ್ವ ಗುಣಗಳು ಉದ್ಯೋಗ ಪಡೆಯಲು ಪ್ರಮುಖ ಅಸ್ತ್ರಗಳಾಗಿವೆ. ಜತೆ ಲಿಖಿತ ಹಾಗೂ ಮೌಖಿಕ ರೂಪದಲ್ಲಿ ಪ್ರಸ್ತುತಪಡಿಸುವಿಕೆ ಅತ್ಯಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net