ಚಾರದಲ್ಲಿ ಚಿರತೆ ದಾಳಿಗೆ ದನ ಮೃತ್ಯು

leopard
leopard
Published on

ಹೆಬ್ರಿ: ಚಾರ ಪಂಚಾಯಿತಿ ವ್ಯಾಪ್ತಿಯ ಹಂದಿಕಲ್ಲು ರಸ್ತೆಯ ಮಣಿಬಚ್ಚಲು ಭುಜಂಗ ಶೆಟ್ಟಿ ಅವರ ಹಟ್ಟಿಗೆ ಚಿರತೆ ದಾಳಿ ಮಾಡಿ ಕೊಟ್ಟಿಗೆಯಲ್ಲಿದ್ದ ದನವನ್ನು ಕೊಂದು ಹಾಕಿದೆ. ಮನೆಯಲ್ಲಿದ್ದ ನಾಯಿಮರಿಗಳನ್ನು ಹೊತ್ತೊಯ್ದಿದೆ.

ಹೆಬ್ರಿ ತಾಲೂಕಿನ ವಿವಿಧೆಡೆ ನಿರಂತರವಾಗಿ ಚಿರತೆ ದಾಳಿ ನಡೆಯುತ್ತಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯವರು ಕ್ರಮ ಕೈಗೊಂಡು ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net