ಐವನ್​ ಡಿಸೋಜಾರಿಗೆ ನೀಡಿ ಸಚಿವ ಸ್ಥಾನ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರನ್ನು ಕಥೊಲಿಕ್​ ಸಭಾ ವತಿಯಿಂದ ಅಭಿನಂದಿಸಿ ವಿಪ ಸದಸ್ಯ ಐವನ್​ ಡಿಸೋಜಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಲಾಯಿತು. ಸಂತೋಷ್​ ಡಿಸೋಜಾ, ಸ್ಟೀವನ್​ ರೊಡ್ರಿಗಸ್​, ಸುನೀಲ್​ ಮೋನಿಸ್​, ಸ್ಟ್ಯಾನಿ ಲೋಬೊ, ಮೆಲ್ವಿನ್​ ಆರಾನ್ಹಾ ಶಿರ್ವ ಇತರರಿದ್ದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರನ್ನು ಕಥೊಲಿಕ್​ ಸಭಾ ವತಿಯಿಂದ ಅಭಿನಂದಿಸಿ ವಿಪ ಸದಸ್ಯ ಐವನ್​ ಡಿಸೋಜಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಲಾಯಿತು. ಸಂತೋಷ್​ ಡಿಸೋಜಾ, ಸ್ಟೀವನ್​ ರೊಡ್ರಿಗಸ್​, ಸುನೀಲ್​ ಮೋನಿಸ್​, ಸ್ಟ್ಯಾನಿ ಲೋಬೊ, ಮೆಲ್ವಿನ್​ ಆರಾನ್ಹಾ ಶಿರ್ವ ಇತರರಿದ್ದರು.
Published on

* ಸಿಎಂಗೆ ಕಥೊಲಿಕ್​ ಸಭಾ ಮನವಿ 

ಉಡುಪಿ: ಕಥೊಲಿಕ್​ ಸಭಾ ಉಡುಪಿ ಹಾಗೂ ಮಂಗಳೂರು ಪ್ರದೇಶದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಜಿಲ್ಲೆಯ ಕ್ರೈಸ್ತ ಸಮುದಾಯದ ಪರವಾಗಿ ಅಭಿನಂದಿಸಲಾಯಿತು.
ಇದೇ ವೇಳೆ ಸಭಾದ ಅಧ್ಯಕ್ಷರು ಮಾತನಾಡಿ, ವಿಧಾನ ಪರಿಷತ್​ ಸದಸ್ಯ ಐವನ್​ ಡಿಸೋಜಾ ಅವರಿಗೆ ಸಚಿವ ಸ್ಥಾನ ನೀಡಬೇಕು. ಕರಾವಳಿಯಲ್ಲಿ ಕ್ರೈಸ್ತ ಸಮುದಾಯ ಪ್ರತಿನಿಧಿಸುತ್ತಿರುವ ಅವರು ಎರಡು ಬಾರಿ ವಿಧಾನ ಪರಿಷತ್​ ಸದಸ್ಯರಾಗಿ, ಪರಿಷತ್​ನ ಮುಖ್ಯ ಸಚೇತಕಾರಾಗಿ, ಕ್ರೈಸ್ತ ಅಭಿವೃದ್ಧಿ ನಿಗಮದಲ್ಲಿ ವಿವಿಧ ರೀತಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರಿಗೆ ತಮ್ಮ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ವಿನಂತಿಸಿದರು.
ರಾಜ್ಯದಲ್ಲಿ ನಡೆಯುವ ಚುನಾವಣೆಗಳಲ್ಲಿ ಕಾಂಗ್ರೆಸ್​ನ ಗೆಲುವಿಗೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾಗಿದೆ. ಆದರೆ, ಸಮುದಾಯಕ್ಕೆ ಪ್ರತಿ ಬಾರಿಯೂ ಸಂಪುಟದಲ್ಲಿ ಉನ್ನತ ಸ್ಥಾನ ನೀಡುವಾಗ ಅವಕಾಶ ವಂಚಿರಾಗುತ್ತಿದ್ದಾರೆ. ತಾವು ಎಲ್ಲ ಸಮುದಾಯದವರಿಗೂ ಸಮಾನ ಅವಕಾಶ ನೀಡಬೇಕು ಎಂದು ತಿಳಿಸಿದರು.
ಐವನ್​ ಡಿಸೋಜಾ ಅವರಿಗೆ ಸಚಿವ ಸ್ಥಾನ ಅಥವಾ ವಿಧಾನ ಪರಿಷತ್​ ಸಭಾಪತಿಯಾಗಿ ನೇಮಕ ಮಾಡಬೇಕು. ಅವರಿಗೆ ಸಚಿವ ಸ್ಥಾನ ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಏಳಿಗೆಗೂ ಮತ್ತಷ್ಟು ಸಹಕಾರಿಯಾಗಲಿದೆ. ಹೀಗಾಗಿ ತಾವು ಕ್ರೈಸ್ತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕಥೊಲಿಕ್​ ಸಭಾ ಮಂಗಳೂರು ಹಾಗೂ ಉಡುಪಿ ಪ್ರದೇಶದ ವತಿಯಿಂದ ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಕಥೊಲಿಕ್​ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸಂತೋಷ್​ ಡಿಸೋಜಾ, ಉಪಾಧ್ಯಕ್ಷರಾದ ಸ್ಟೀವನ್​ ರೊಡ್ರಿಗಸ್​, ಸುನೀಲ್​ ಮೋನಿಸ್​, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್​ ಆರಾನ್ಹಾ ಶಿರ್ವ, ಕುಂದಾಪುರ ವಲಯಾಧ್ಯಕ್ಷೆ ಶೈಲಾ ಅಲ್ಮೇಡಾ, ಕಾರ್ಕಳ ಅಧ್ಯಕ್ಷರಾದ ಅಂಟನಿ ಮಿರಾಂಡಾ, ಉಡುಪಿ ಅಧ್ಯಕ್ಷ ಕಿರಣ್​ ಲೂವಿಸ್​, ಕುಂದಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್​ ಕ್ರಾಸ್ಟೊ ಹಾಗೂ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net