ಕುಂದಾಪುರ: ಕರ್ಕುಂಜೆ ಗ್ರಾಮದಲ್ಲಿ ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಕಳವಾಗಿದೆ. ಕರ್ಕುಂಜೆ ಗ್ರಾಮದ ಗಂಗಾಧರ ಮಂಜರು ಮನೆಯ ಬೆಡ್‌ರೂಮ್‌ನ ಕಪಾಟಿನ ಒಳಗೆ 4 ಗ್ರಾಂ ತೂಕದ ಚಿನ್ನದ ಹರಳಿನ ಉಂಗುರ, 4 ಗ್ರಾಂ ತೂಕದ ಚಿನ್ನದ ಹರಳಿನ ಉಂಗುರ, 8 ಗ್ರಾಂ ತೂಕದ ಚಿನ್ನದ ಬ್ರಾಸ್ ಲೇಟ್, ಲಕ್ಷ್ಮೀ ಪೆಂಡೆಂಟ್ ಇರುವ 40 ಗ್ರಾಂ ತೂಕದ ಚಿನ್ನದ ಚೈನನ್ನು ಇಟ್ಟಿದ್ದು ಕಪಾಟಿಗೆ ಬೀಗ ಹಾಕಿರಲಿಲ್ಲ. ಸೆ.6ರಂದು ರಾತ್ರಿ ಗೋದ್ರೇಜ್‌ನಲ್ಲಿ ಇಟ್ಟಿದ್ದ ಚಿನ್ನದ ಒಡವೆ ತೆಗೆಯಲು ಹೋದಾಗ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಚಿನ್ನಾಭರಣಗಳ ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.