ತ್ಯಾಜ್ಯದಲ್ಲಿ ನಗದು, ಚಿನ್ನಾಭರಣ ಪತ್ತೆ

 ತ್ಯಾಜ್ಯದಲ್ಲಿ ಸಿಕ್ಕಿದ ಚಿನ್ನ, ನಗದನ್ನು ಮನೆಯವರಿಗೆ ಹಸ್ತಾಂತರಿಸಿದ ಕಮಲಾ ಮತ್ತು ಮಮತಾ.
ತ್ಯಾಜ್ಯದಲ್ಲಿ ಸಿಕ್ಕಿದ ಚಿನ್ನ, ನಗದನ್ನು ಮನೆಯವರಿಗೆ ಹಸ್ತಾಂತರಿಸಿದ ಕಮಲಾ ಮತ್ತು ಮಮತಾ.
Published on

ಕಾಸರಗೋಡು: ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸುವಾಗ ಸಿಕ್ಕಿದ ಎರಡು ಪವನ್ ಚಿನ್ನಾಭರಣ ಹಾಗೂ 30 ಸಾವಿರ ರೂ. ನಗದನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪಳ್ಳಿಕ್ಕರೆ ಗ್ರಾಪಂನ 10 ಹಾಗೂ 11ನೇ ವಾರ್ಡ್‌ನ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರಾದ ಕಮಲಾ ಎನ್. ಹಾಗೂ ಮಮತಾ ಪ್ರಾಮಾಣಿಕತೆ ಮೆರೆದಿದ್ದಾರೆ.

ಪೊಯಿನಾಚಿ ಪರಂಬನ್ ನಿವಾಸಿ ಕೃಷ್ಣನ್ ಎಂಬವರ ಮನೆಯಿಂದ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಡಿಸುತ್ತಿದ್ದಾಗ ಚಿನ್ನ ಹಾಗೂ ನಗದು ಕಂಡು ಬಂದಿದೆ. ಕೃಷ್ಣನ್ ಅವರ ಪತ್ನಿ ಜಾನಕಿ ಇತ್ತೀಚೆಗೆ ನಿಧನರಾಗಿದ್ದು, ಅವರು ಉಪಯೋಗಿಸುತ್ತಿದ್ದ ಚೀಲದಲ್ಲಿ ಬಾಚಣಿಗೆ ಸೇರಿದಂತೆ ಕೆಲವೊಂದು ವಸ್ತುಗಳನ್ನು ತುಂಬಿಸಿಡಲಾಗಿತ್ತು.
ಸೋಮವಾರ ತ್ಯಾಜ್ಯ ಸಂಗ್ರಹಕ್ಕೆ ಬಂದ ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರಾದ ಕಮಲಾ ಹಾಗೂ ಮಮತಾ ಅವರಿಗೆ ಮನೆಯವರು ತ್ಯಾಜ್ಯವಿದ್ದ ಚೀಲವನ್ನು ನೀಡಿದ್ದರು. ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಡಿಸುತ್ತಿದ್ದಾಗ ಹಣ, ಚಿನ್ನ ಪತ್ತೆಯಾಗಿದ್ದು, ಸ್ಥಳದಲ್ಲೇ ಇವುಗಳನ್ನು ಕೃಷ್ಣನ್ ಅವರಿಗೆ ಹಸ್ತಾಂತರಿಸಿದ್ದಾರೆ. ಕಾರ್ಯಕರ್ತೆಯರ ಪ್ರಾವಾಣಿಕತೆಗೆ ಕೃಷ್ಣನ್ ಕುಟುಂಬ ಕೃತಜ್ಞತೆ ಸಲ್ಲಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net