ಸೃಜನಶೀಲತೆಯಿಂದ ವೃತ್ತಿಯಲ್ಲಿ ಬೆಳವಣಿಗೆ

 ರುಡ್‌ಸೆಟ್ ಸಂಸ್ಥೆಯಲ್ಲಿ ಮನಮೋಹನ್ ನಾಯಕ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಸುನೀಲ್ ನಾಯ್ಕ, ಅತಿಥಿ ಉಪನ್ಯಾಸಕಿ ಮಾಧವಿ ಎಂ.ರೈ ಉಪಸ್ಥಿತರಿದ್ದರು.
ರುಡ್‌ಸೆಟ್ ಸಂಸ್ಥೆಯಲ್ಲಿ ಮನಮೋಹನ್ ನಾಯಕ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಸುನೀಲ್ ನಾಯ್ಕ, ಅತಿಥಿ ಉಪನ್ಯಾಸಕಿ ಮಾಧವಿ ಎಂ.ರೈ ಉಪಸ್ಥಿತರಿದ್ದರು.
Published on
ಬೆಳ್ತಂಗಡಿ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶ್ರಯದಂತೆ ನಡೆಯುವ ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆಯುವುದೇ ಸೌಭಾಗ್ಯ. ಬ್ಯೂಟಿಪಾರ್ಲರ್ ವೃತ್ತಿಯಲ್ಲಿ ಪ್ರತಿಯೊಬ್ಬರೂ ತನ್ನದೇ ಆದ ಸೃಜನಶೀಲತೆ ಅಳವಡಿಸಿಕೊಂಡರೆ ಬೆಳವಣಿಗೆ ಹೊಂದಲು ಸಾಧ್ಯ. ಸಮಯಪಾಲನೆ, ಶಿಸ್ತು ಜತೆಗೆ ಇರಲಿ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಶಿಕ್ಷಕ ಮನಮೋಹನ್ ನಾಯಕ್ ಹೇಳಿದರು.
ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 35 ದಿನಗಳ ಕಾಲ ನಡೆದ ವಸತಿಯುತ ಮಹಿಳಾ ಬ್ಯೂಟಿಪಾರ್ಲರ್ ನಿರ್ವಹಣೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಸುನೀಲ್ ನಾಯ್ಕ ಅಧ್ಯಕ್ಷತೆವಹಿಸಿ ಮಾತನಾಡಿ, ಹಣಕಾಸಿನ ಜ್ಞಾನ ಮತ್ತು ಡಿಜಿಟಲ್ ವ್ಯವಹಾರಗಳ ಅರಿವು ಇಂದಿನ ಕಾಲದಲ್ಲಿ ಅತ್ಯಗತ್ಯ ಎಂದರು.
ಅತಿಥಿ ಉಪನ್ಯಾಸಕಿ ಮಾಧವಿ ಎಂ.ರೈ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕ ಕರುಣಾಕರ್ ಕೆ.ಜೈನ್ ವಂದಿಸಿದರು. ಜಯಲಕ್ಷ್ಮೀ, ಶೈಲಜಾ ತರಬೇತಿ ಅನುಭವ ಹಂಚಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net