

ಗುರುಪುರ: ಗಂಜಿಮಠ ಗ್ರಾಪಂ ವ್ಯಾಪ್ತಿಯ ಮಳಲಿಗೆ ಹತ್ತಿರದ ನಾಡಾಜೆ ಎಂಬಲ್ಲಿ ಸೋಮವಾರ ಬೆಳಗ್ಗೆ ಕಾರು ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ, ನಾಡಾಣೆ ಬಾಕಿಮಾರು ಸಮೀಪದ ನಿವಾಸಿ, ಖಾಸಗಿ ಬ್ಯಾಂಕ್ ಸಿಬ್ಬಂದಿ ಮುಕೇಶ್(40) ಮೃತಪಟ್ಟಿದ್ದಾರೆ.
ಕಾರು ಕೈಕಂಬದಿಂದ ಮಳಲಿಯತ್ತ, ಆಕ್ವಿವಾ ಮಳಲಿಯಿಂದ ಕೈಕಂಬದತ್ತ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಳೆದ ವರ್ಷ ವಿವಾಹವಾಗಿದ್ದ ಇವರಿಗೆ ಮಗುವೊಂದಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.