ಚಾಲಕನನ್ನು ಹೊರದಬ್ಬಿ ಕಾರು ಕಳ್ಳತನ

Theft
Theft
Published on

ಕಾಸರಗೋಡು: ಕಾರು ತಡೆದು ನಿಲ್ಲಿಸಿ ಚಾಲಕನನ್ನು ಹೊರದಬ್ಬಿ ನಂತರ ಕಾರನ್ನು ಕದ್ದೊಯ್ದ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಠಾಣಾ ವ್ಯಾಪ್ತಿಯ ಮೊಹಮ್ಮದ್ ಸಯ್ಯೀದ್ ಮುಸಮ್ಮಿಲ್ ಎಂಬುವರು ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.


ಕಾರನ್ನು ಚಟ್ಟಂಚಾಲ್ ಪ್ರದೇಶದಿಂದ ವಾರಸುದಾರರಿಲ್ಲದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮಂಗಳವಾರ ತಡರಾತ್ರಿ ಮೊಹಮ್ಮದ್ ಸಯ್ಯೀದ್ ಮುಸಮ್ಮಿಲ್ ಚಲಾಯಿಸುತ್ತಿದ್ದ ಟಾಟಾ ಟಿಯಾಗೋ ಇಲೆಕ್ಟ್ರಿಕ್ ಕಾರನ್ನು ಖಾದರ್ ಎಂಬ ವ್ಯಕ್ತಿ ಹಿಂಬಾಲಿಸಿದ್ದಾನೆ. ಬಳಿಕ ಸೀತಾಂಗೋಳಿಯಲ್ಲಿ ಕಾರನ್ನು ತಡೆದು ನಿಲ್ಲಿಸಿ ಚಾಲಕನನ್ನು ಹೊರದಬ್ಬಿದ ಬಳಿಕ ವ್ಯಕ್ತಿ ಕಾರನ್ನು ಕೊಂಡೊಯ್ದಿರುವುದಾಗಿ ದೂರಲಾಗಿದೆ.

ಕಾರು ಚಟ್ಟಂಚಾಲ್ ತಲುಪಿದಾಗ ಚಾರ್ಜ್ ಖಾಲಿಯಾಗಿದ್ದು, ಇದರಿಂದ ಕಾರನ್ನು ಅಲ್ಲೇ ಬಿಟ್ಟು ಆರೋಪಿ ಪರಾರಿಯಾಗಿರಬೇಕೆಂದು ಸಂಶಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net