ಮೂಡುಬಿದಿರೆ: ಇಲ್ಲಿನ ಸತ್ಯನಾರಾಯಣ ದೇವಸ್ಥಾನದ ಬಳಿ ಭಾನುವಾರ ರಾತ್ರಿ ಹಣ್ಣಿನಂಗಡಿ ಎದುರು ಬಲೆನೋ ಕಾರೊಂದು ಪಲ್ಟಿ ಹೊಡೆದು ಅಂಗಡಿಗೆ ನುಗ್ಗಿದೆ.
ಕಾರು ಜ್ಯೋತಿ ನಗರ ಕಡೆಯಿಂದ ಬರುತ್ತಿದ್ದಾಗ ಹಣ್ಣಿನಂಗಡಿ ಬಳಿ ನಿಂತಿದ್ದ ಮಾರುತಿ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಇನ್ನೊಂದು ಕಾರಿಗೆ ಗುದ್ದಿ ಪಲ್ಟಿ ಹೊಡೆದು ಹಣ್ಣಿನಂಗಡಿ ಮೇಲೆ ಎರಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಕಾರನ್ನು ಎತ್ತಿ ಸ್ವಸ್ಥಾನದಲ್ಲಿರಿಸಿದ್ದಾರೆ.