ಕ್ಯಾಂಟೀನ್ ಮಾಲೀಕ ನೇಣಿಗೆ ಶರಣು

SUICIDE
SUICIDE
Published on

ಬಂಟ್ವಾಳ: ರಾಮಲ್ ಕಟ್ಟೆ ಅರ್ಬನಗುಡ್ಡೆ ನಿವಾಸಿ ನಾರಾಯಣ ಪೂಜಾರಿ(52) ಎಂಬುವರು ಕ್ಯಾಂಟೀನ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಿಂದ ಬೆಳಗ್ಗೆ 8ರ ಸುಮಾರಿಗೆ ಕ್ಯಾಂಟೀನ್‌ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಅವರು ಬಳಿಕ ಕ್ಯಾಂಟೀನ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net