ತೋಡಾರಿನಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ

 ತೋಡಾರಿನಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಿತು. ಡಾ.ಅಮರಶ್ರೀ ಅಮರನಾಥ ಶೆಟ್ಟಿ, ಐ.ಕೆ.ಮೂಸದಾರಿ, ಎಂ.ಎ.ಎಸ್.ಆಸೀಫ್ ಇಕ್ಬಾಲ್, ಅಬ್ದುಲ್ ರಝಾಕ್ ಮದನಿ, ನಾವಫ್‌ಪಡು,  ಅಬ್ದುಲ್ ರಹಿಮಾನ್ ಗಾಂಧಿನಗರ, ಮನ್ಸೂರ್ ಪಡ್ಡಂದಡ್ಕ, ಅಮೀರ್ ಹಂಡೇಲ್ ಮತ್ತಿತರರಿದ್ದರು.
ತೋಡಾರಿನಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಿತು. ಡಾ.ಅಮರಶ್ರೀ ಅಮರನಾಥ ಶೆಟ್ಟಿ, ಐ.ಕೆ.ಮೂಸದಾರಿ, ಎಂ.ಎ.ಎಸ್.ಆಸೀಫ್ ಇಕ್ಬಾಲ್, ಅಬ್ದುಲ್ ರಝಾಕ್ ಮದನಿ, ನಾವಫ್‌ಪಡು, ಅಬ್ದುಲ್ ರಹಿಮಾನ್ ಗಾಂಧಿನಗರ, ಮನ್ಸೂರ್ ಪಡ್ಡಂದಡ್ಕ, ಅಮೀರ್ ಹಂಡೇಲ್ ಮತ್ತಿತರರಿದ್ದರು.
Published on
 ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
 ಕ್ಯಾನ್ಸರ್ ರೋಗವನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯ ಎಂದು ಅಮರನಾಥ ಶೆಟ್ಟಿ ಟ್ರಸ್ಟ್ ಸಂಸ್ಥಾಪಕಿ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಹೇಳಿದರು.
ತೋಡಾರಿನ ದಾರುಸ್ಸಲಾಂ ಕೇಂದ್ರ ಮದರಸದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಮೂಡುಬಿದಿರೆ ವಲಯ, ಕೆ.ಅಮರನಾಥ ಶೆಟ್ಟಿ ಚಾರಿಟೆಬಲ್ ಟ್ರಸ್ಟ್, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಆಶ್ರಯದಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಭಾನುವಾರ ಮಾತನಾಡಿದರು. 
 ತೋಡಾರು ಬದ್ರಿಯ ಸುನ್ನೀ ಜುಮಾ ಮಸೀದಿ ಧರ್ಮಗುರು ಐ.ಕೆ.ಮೂಸದಾರಿ ಉದ್ಘಾಟಿಸಿದರು. ತೋಡಾರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ, ಎಸ್‌ಕೆಎಸ್ಸೆಸ್ಸೆಫ್ ಮೂಡುಬಿದಿರೆ ವಲಯದ ಕೋಶಾಧಿಕಾರಿ ಎಂ.ಎ.ಎಸ್.ಆಸೀಫ್ ಇಕ್ಬಾಲ್, ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ, ಪ್ರಧಾನ ಕಾರ್ಯದರ್ಶಿ ನಾವಫ್‌ಪಡು, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಗಾಂಧಿನಗರ, ಎಸ್‌ಕೆಎಸ್ಸೆಸ್ಸೆಫ್ ನಿಗಮದ ಅಧ್ಯಕ್ಷ ಮನ್ಸೂರ್ ಪಡ್ಡಂದಡ್ಕ, ಉಪಾಧ್ಯಕ್ಷ ಅಮೀರ್ ಹಂಡೇಲ್, ತೋಡಾರು ಬದ್ರಿಯಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್, ಖಜಾಂಚಿ ಉನ್ಞಾಕ, ಉಪಾಧ್ಯಕ್ಷ ಹಕೀಂ ಮಲ್ಲೂರು, ಎಸ್‌ಕೆಎಸ್ಸೆಸ್ಸೆಫ್ ಅಶ್ರಫ್ ಗುತ್ತು, ಪರಂದಡ್ಕ ಕ್ಲಸ್ಟರ್ ಅಧ್ಯಕ್ಷ ಖಲೀದ್, ಎಸ್‌ಕೆಎಸ್ಸೆಸ್ಸೆಫ್ ತೋಡಾರ್ ಯುನಿಟ್ ಅಧ್ಯಕ್ಷ ಅನ್ಸರ್ ನಡುಮನೆ, ತೋಡಾರು ದಾರುಸ್ಸಲಾಂ ಕೇಂದ್ರ ಮದರಸದ ಪ್ರಾಂಶುಪಾಲ ಅಬ್ದುಲ್ ರಝಾಕ್ ಹಜಾರಿ, ಅಸ್ಗರ್ ಆಲಿ ಯಮನ್, ಮೂಡುಬಿದಿರೆ ಇಬಾದ್‌ನ ಅಧ್ಯಕ್ಷ ಅಲ್ತಾಫ್ ಮುಸ್ಲಿಯರ್, ದಾರುಸ್ಸಲಾಂ ಕೇಂದ್ರ ಮದರಸದ ಅಧ್ಯಕ್ಷ ಫಾರೂಕ್, ಪ್ರಧಾನ ಉನ್ಞಾಕ, ಟಿ.ಎಚ್ ಫಾರೂಕ್, ಎಸ್‌ಕೆಎಸ್ಸೆಸ್ಸೆಫ್ ಹಿದಾಯತ್ ನಗರ ಯುನಿಟ್ ಅಧ್ಯಕ್ಷ ನಸೀಫ್, ಎಸ್‌ಕೆಎಸ್ಸೆಸ್ಸೆಫ್ ತೋಡಾರ್ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ನಾಸೀರ್ ಫೈಜಿ ಉಪಸ್ಥಿತರಿದ್ದರು. ಸ್ವಲಿಹ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net