ಮಾನವೀಯ ಮೌಲ್ಯ ಮೆರೆದ ಕ್ಯಾನ್ಸರ್ ವೈದ್ಯ

ಡಾ.ಡಿ.ಪಿ.ರಮೇಶ್ 5 ಸಾವಿರ ರೂ. ಮೊತ್ತದ ಬೈ ಹುಲ್ಲನ್ನು ಹಸ್ತಾಂತರಿಸಿದರು.
ಡಾ.ಡಿ.ಪಿ.ರಮೇಶ್ 5 ಸಾವಿರ ರೂ. ಮೊತ್ತದ ಬೈ ಹುಲ್ಲನ್ನು ಹಸ್ತಾಂತರಿಸಿದರು.
Published on
ಉಪ್ಪಿನಂಗಡಿ: ಮಲೆನಾಡಗಿಡ್ಡ ಜಾತಿಯ ಬರೋಬ್ಬರಿ 63 ದನಕರುಗಳೊಂದಿಗೆ ಜೀವನ ನಡೆಸುತ್ತಿರುವ ಕಡಬ ತಾಲೂಕು ಗೋಳಿತೊಟ್ಟು ಗ್ರಾಮದ ತಿರ್ಲೆ ನಿವಾಸಿಗರಾದ ನಾಲ್ವರು ಸಹೋದರಿಯರ ಗೋವಿನ ಮೇಲಿನ ಕಾಳಜಿ ಮೆಚ್ಚಿ ಆನ್ಸರ್ ಫಾರ್ ಕ್ಯಾನ್ಸರ್ ಖ್ಯಾತಿಯ ವೈದ್ಯ ಡಾ.ಡಿ.ಪಿ.ರಮೇಶ್ 5 ಸಾವಿರ ರೂ. ಮೌಲ್ಯದ ಬೈ ಹುಲ್ಲನ್ನು ನೀಡಿದ್ದಾರೆ.
ಪಾಲಕರನ್ನು ಕಳೆದುಕೊಂಡ ಬಳಿಕ ಅನಾಥರಂತೆ ಬಾಳುತ್ತಿರುವ ತಿರ್ಲೆ ಮರಂದೆ ಮನೆ ನಿವಾಸಿಗರಾದ ನಾಗಮ್ಮ ಗೌಡ, ಚೆನ್ನಮ್ಮ ಗೌಡ, ರೇವತಿ ಗೌಡ, ಲಲಿತಾ ಗೌಡ ಎಂಬ ನಾಲ್ವರು ಸಹೋದರಿಯರು 5 ಎಕರೆ ಪ್ರದೇಶದ ಕೃಷಿ ಭೂಮಿ ಮತ್ತದರಲ್ಲಿನ ಚಿಕ್ಕದಾದ ಮನೆಯಲ್ಲಿ ವಾಸ್ತವ್ಯ ಹೊಂದಿದ್ದು, ಸ್ಥಳೀಯರು ಗಣತಿ ಮಾಡುವಾಗ 63 ದನಕರುಗಳು ಲೆಕ್ಕಕ್ಕೆ ಸಿಕ್ಕಿವೆ. ಕಾಡಿನಲ್ಲಿನ ಪ್ರಾಣಿಗಳು ಕಾಡಿನೊಳಗೆ ಹೇಗೆ ಜೀವನ ನಡೆಸುತ್ತಿದೆಯೋ ಅಂತೆಯೇ ಇವರ ಜಾನುವಾರುಗಳು ಜೀವನ ನಡೆಸುತ್ತಿರುತ್ತವೆ. ಇಷ್ಟೊಂದು ಸಂಖ್ಯೆಯ ದನಕರುಗಳಿಂದ ಎಷ್ಟು ಹಾಲು ಸಿಗುತ್ತದೆ? ಎಂದು ಪ್ರಶ್ನಿಸಿದರೆ ಮನೆ ಹಿರಿಯರಾದ ನಾಗಮ್ಮ ನೀಡಿದ್ದ ಉತ್ತರ ಅವರ ಕಳಕಳಿ ಸೂಚಿಸುತ್ತಿತ್ತು.
ಮಳೆಗಾಲದಲ್ಲಿ ಮೇವು ತಂದು ಹಾಕುತ್ತಿದ್ದೆವು. ಈಗ ಬೇಸಿಗೆ. ನಮಗೆ ಮೇವು ಸಿಗುತ್ತಿಲ್ಲ. ನೀರನ್ನಷ್ಟೇ ಇಡುತ್ತಿದ್ದೇವೆ. ಅವೇ ಮೇಯಲು ಹೋಗಿ ಹೊಟ್ಟೆ ತುಂಬಿಸುತ್ತವೆ. ಮೇವು ನೀಡದೇ ಹಾಲು ಕರೆಯುವುದು ಸರಿಯಾ? ಹಾಗಾಗಿ ಹಾಲು ತೆಗೆಯುತ್ತಿಲ್ಲ ಎಂದು ಉತ್ತರಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net