ಸಾಮಾಜಿಕ ಸೇವೆಯೂ ಕೆನರಾ ಬ್ಯಾಂಕ್​ನ ಬದ್ಧತೆ

ಉಡುಪಿ ಶಿರೂರು ಮಠದ ಪರ್ಯಾಯಕ್ಕೆ ನೀಡಿದ ಹೊರೆಕಾಣಿಕೆಯ ಮೆರವಣಿಗೆಗೆ ಸಂಜೀವಕುಮಾರ್​ ಚಾಲನೆ ನೀಡಿದರು. ಸುಪ್ರಸಾದ್​ ಶೆಟ್ಟಿ ಬೈಕಾಡಿ, ಗಂಗಾಧರ್​, ಮೇಘಾ ಶೆಟ್ಟಿ, ಮಹಾಮಾಯಾ ಪ್ರಸಾದ್​ ರಾಯ್​, ಪಬಿತ್ರಕುಮಾರ್​ ದಾಸ್​, ಡಾ. ಉದಯಕುಮಾರ್​ ಸರಳತ್ತಾಯ, ಹರಿ ಕೋಟ್ಯಾನ್​, ವಿಷ್ಣುಪ್ರಸಾದ್​ ಪಾಡಿಗಾರ್​ ಇತರರಿದ್ದರು.
ಉಡುಪಿ ಶಿರೂರು ಮಠದ ಪರ್ಯಾಯಕ್ಕೆ ನೀಡಿದ ಹೊರೆಕಾಣಿಕೆಯ ಮೆರವಣಿಗೆಗೆ ಸಂಜೀವಕುಮಾರ್​ ಚಾಲನೆ ನೀಡಿದರು. ಸುಪ್ರಸಾದ್​ ಶೆಟ್ಟಿ ಬೈಕಾಡಿ, ಗಂಗಾಧರ್​, ಮೇಘಾ ಶೆಟ್ಟಿ, ಮಹಾಮಾಯಾ ಪ್ರಸಾದ್​ ರಾಯ್​, ಪಬಿತ್ರಕುಮಾರ್​ ದಾಸ್​, ಡಾ. ಉದಯಕುಮಾರ್​ ಸರಳತ್ತಾಯ, ಹರಿ ಕೋಟ್ಯಾನ್​, ವಿಷ್ಣುಪ್ರಸಾದ್​ ಪಾಡಿಗಾರ್​ ಇತರರಿದ್ದರು.
Published on

* ಕೆನರಾ ಬ್ಯಾಂಕ್​ನ ಎಜಿಎಂ ಸಂಜೀವಕುಮಾರ್​ ಅನಿಸಿಕೆ

* ಶೀರೂರು ಮಠದ ಪರ್ಯಾಯಕ್ಕೆ ಹಸಿರು ಹೊರೆಕಾಣಿಕೆ

ಉಡುಪಿ: ಬ್ಯಾಂಕ್​ಗಳು ಕೇವಲ ಸಾಲ ನೀಡಲು ಅಥವಾ ಗ್ರಾಹಕರ ಠೇವಣಿ ಇಟ್ಟುಕೊಂಡು ಬಡ್ಡಿ ನೀಡಲು ಮಾತ್ರ ಸೀಮಿತವಾಗಿಲ್ಲ. ವಿವಿಧ ಬ್ಯಾಂಕಿಂಗ್​ ಸೌಲಭ್ಯದೊಂದಿಗೆ ಸಾಮಾಜಿಕ ಸೇವೆ, ಅಭಿವೃದ್ಧಿಗೆ ಸಹಕಾರ ನೀಡುವುದೂ ಸಹ ನಮ್ಮ ಬದ್ಧತೆಯಾಗಿದೆ. ಉಡುಪಿಯ ಪರ್ಯಾಯವೂ ಸಹ ಶ್ರೀಕೃಷ್ಣನ ಪೂಜಾರಾಧನೆಯೊಂದಿಗೆ ಭಕ್ತರಿಗೆ ಪ್ರಸಾದ ಭೋಜನ ನೀಡುವ ಮಹಾಭಿಯಾನವಾಗಿದೆ. ಹೀಗಾಗಿ ಕೆನರಾ ಬ್ಯಾಂಕ್​ ವತಿಯಿಂದ ಶೀರೂರು ಪರ್ಯಾಯಕ್ಕೆ ಹಸಿರು ಹೊರೆಕಾಣಿಕೆ ನೀಡಲಾಗುತ್ತಿದೆ ಎಂದು ಕೆನರಾ ಬ್ಯಾಂಕ್​ನ ಎಜಿಎಂ ಸಂಜೀವಕುಮಾರ್​ ತಿಳಿಸಿದರು.
ಉಡುಪಿಯ ಜೋಡುಕಟ್ಟೆಯ ಪೂರ್ಣಪ್ರಜ್ಞ ಮಂಟಪದ ಬಳಿ ಕೆನರಾ ಬ್ಯಾಂಕ್​ ಹಾಗೂ ವಿವಿಧ ಸಂಘಟನೆಗಳಿಂದ ಶೀರೂರು ಪರ್ಯಾಯಕ್ಕೆ ನೀಡಲ್ಪಟ್ಟ ಹಸಿರು ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆಗೆ ಸೋಮವಾರ (ಜ.12) ಚಾಲನೆ ನೀಡಿ ಮಾತನಾಡಿದರು.
ಶೀರೂರು ಪರ್ಯಾಯ ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್​ ಶೆಟ್ಟಿ ಬೈಕಾಡಿ ಮಾತನಾಡಿ, ಶಿರೂರು ಪರ್ಯಾಯಕ್ಕೆ ಹೊರೆಕಾಣಿಕೆ ಸಲ್ಲಿಸುತ್ತಿರುವ ಕೆನರಾ ಬ್ಯಾಂಕ್​. ಮೀನುಗಾರರ ಸಂಘ ಹಾಗೂ ವಿವಿಧ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಮಲ್ಪೆ ಮೀನುಗಾರರ ಸಂ ಮತ್ತು ವಿವಿಧ ಮೀನುಗಾರರ ಸಂಟನೆ, ತುಳುನಾಡು ರಕ್ಷಣಾ ವೇದಿಕೆ, ಆರ್​ಎಸ್​ಬಿ ಸಮಾಜ ಹಾಗೂ ಪದ್ಮಶಾಲಿ ಸಮಾಜದ ವತಿಯಿಂದಲೂ ಸಹ ಶೀರೂರು ಪರ್ಯಾಯಕ್ಕೆ ಹಸಿರು ಹೊರೆಕಾಣಿಕೆ ಸಲ್ಲಿಸಲಾಯಿತು. ವಾದ್ಯ ಹಾಗೂ ಬ್ಯಾಂಡ್ ಸೆಟ್​, ಕುಣಿತ ಭಜನೆಯೊಂದಿಗೆ ನೂರಾರು ವಾಹನಗಳಲ್ಲಿ ಸುವಸ್ತುಗಳನ್ನು ಮೆರವಣಿಗೆ ಮೂಲಕ 'ಅನ್ನ ವಿಠ್ಠಲ' ಉಗ್ರಾಣಕ್ಕೆ ಸಾಗಿಸಲಾಯಿತು.
ಕೆನರಾ ಬ್ಯಾಂಕ್​ನ ಚೀಫ್ ಮೆನೇಜರ್​ ಗಂಗಾಧರ್​, ಡಿಜಿಎಂ ಪಬಿತ್ರಕುಮಾರ್​ ದಾಸ್​, ಸೀನಿಯರ್​ ಮೆನೇಜರ್​ ಮೇಘಾ ಶೆಟ್ಟಿ, ಮಹಾಮಾಯಾ ಪ್ರಸಾದ್​ ರಾಯ್​, ತುಳುನಾಡು ರಕ್ಷಣಾ ವೇದಿಕೆಯ ಜಯರಾಂ ಪೂಜಾರಿ, ಸುರೇಂದ್ರ ಪೂಜಾರಿ, ಫ್ರಾಂಕ್ಲಿ ಡಿಸೋಜಾ, ಪದ್ಮಶಾಲಿ ಸಮಾಜದ ರವಿ ಶೆಟ್ಟಿಗಾರ್​, ಮೀನುಗಾರ ಮುಖಂಡ ಹರಿ ಕೋಟ್ಯಾನ್​, ಶೀರೂರು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ, ಪರ್ಯಾಯ ಸ್ವಾಗತ ಸಮಿತಿಯ ಮೋಹನ್​ ಭಟ್​, ನಂದನ್​ ಜೈನ್​, ವಿಷ್ಣುಪ್ರಸಾದ್​ ಪಾಡಿಗಾರ್​, ಸಂದೀಪ್​ ಮಂಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net