ವಾರದಲ್ಲಿ ನೀಡಿ ಐದೇ ದಿನ ಕೆಲಸ ನಿಗದಿ

ವಾರದಲ್ಲಿ ಐದೇ ದಿನ ಕೆಲಸ ನಿಗದಿ ಮಾಡುವಂತೆ ಆಗ್ರಹಿಸಿ ಮಣಿಪಾಲದಲ್ಲಿ ಕೆನರಾ ಬ್ಯಾಂಕ್​ ಆಫೀಸರ್ಸ್​ ಅಸೋಶಿಯೇಷನ್​ನ ಪದಾಧಿಕಾರಿಗಳು ಪ್ರತಿಭಟಿಸಿದರು. ಸಚಿನ್​ ಶೆಟ್ಟಿ, ಸೂರಜ್​ ಆರ್​. ಉಪ್ಪೂರು, ವಿಶಾಲ್​ ಸಿಂಗ್​, ರೋಹಿತ್​, ಸಾಯಿಪ್ರಿಯಾ, ದುರ್ಗಾಪ್ರಸಾದ್​ ಶೆಟ್ಟಿ ಇತರರಿದ್ದರು.
ವಾರದಲ್ಲಿ ಐದೇ ದಿನ ಕೆಲಸ ನಿಗದಿ ಮಾಡುವಂತೆ ಆಗ್ರಹಿಸಿ ಮಣಿಪಾಲದಲ್ಲಿ ಕೆನರಾ ಬ್ಯಾಂಕ್​ ಆಫೀಸರ್ಸ್​ ಅಸೋಶಿಯೇಷನ್​ನ ಪದಾಧಿಕಾರಿಗಳು ಪ್ರತಿಭಟಿಸಿದರು. ಸಚಿನ್​ ಶೆಟ್ಟಿ, ಸೂರಜ್​ ಆರ್​. ಉಪ್ಪೂರು, ವಿಶಾಲ್​ ಸಿಂಗ್​, ರೋಹಿತ್​, ಸಾಯಿಪ್ರಿಯಾ, ದುರ್ಗಾಪ್ರಸಾದ್​ ಶೆಟ್ಟಿ ಇತರರಿದ್ದರು.
Published on

* ಕೆನರಾ ಬ್ಯಾಂಕ್​ ನೌಕರರಿಂದ ಮಣಿಪಾಲದಲ್ಲಿ ಪ್ರತಿಭಟನೆ

* ಕೂಡಲೇ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಆಗ್ರಹ

ಉಡುಪಿ: ಬ್ಯಾಂಕಿಂಗ್​ ಕ್ಷೇತ್ರದಲ್ಲಿ ವಾರದಲ್ಲಿ ಐದು ದಿನ ಮಾತ್ರ ಕೆಲಸದ ದಿನ ನಿಗದಿಪಡಿಸುವಂತೆ ಒತ್ತಾಯಿಸಿ ಯುನೈಟೆಡ್​ ಫೋರಂ ಆಫ್​ ಬ್ಯಾಂಕ್​ ಯೂನಿಯನ್ಸ್​ ವತಿಯಿಂದ ದೇಶಾದ್ಯಂತ ಜ.27ರಂದು ಪ್ರತಿಭಟನೆ ನಡೆಸಲಾಗಿದ್ದು, ಉಡುಪಿಯ ಮಣಿಪಾಲದಲ್ಲಿಯೂ ಸಹ ಕೆನರಾ ಬ್ಯಾಂಕ್​ ಆಫೀಸರ್ಸ್​ ಅಸೋಶಿಯೇಷನ್​ನ ಮಣಿಪಾಲ ಪ್ರಾಂತದ ವತಿಯಿಂದ ಮಂಗಳವಾರ (ಜ.27) ಪ್ರತಿಭಟಿಸಲಾಯಿತು.
ಮಣಿಪಾಲದ ಕೆನರಾ ಬ್ಯಾಂಕ್​ ವೃತ್ತ ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಟನೆಯ ಅಧ್ಯಕ್ಷ ಸಚಿನ್​ ಶೆಟ್ಟಿ ಮಾತನಾಡಿ, ದೇಶದ ವಿಮಾ ಕಂಪನಿಗಳು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುತ್ತಿದೆ. ಬ್ಯಾಂಕ್​ಗಳ ಹೆಡ್​ ಆಗಿರುವ ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ (ಆರ್​ಬಿಐ) ಸಹ ವಾರದಲ್ಲಿ ಕೆಲಸ ಮಾಡುತ್ತಿದೆ. ಜಾಗತಿಕವಾಗಿಯೂ ಎಲ್ಲ ಬ್ಯಾಂಕಿಂಗ್​ ಕ್ಷೇತ್ರಗಳು ವಾರದಲ್ಲಿ ಐದೇ ದಿನ ಕೆಲಸ ಮಾಡುತ್ತಿದೆ ಎಂದರು.
ನಿತ್ಯದ ಬ್ಯಾಂಕಿಂಗ್​ ಕೆಲಸದಿಂದಾಗಿ ಉದ್ಯೋಗಿಗಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಬ್ಯಾಂಕ್​ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ಮಾಡುವಂತಾಗಿದೆ. ಹೀಗಾಗಿ ದೇಶದಲ್ಲಿರುವ ಎಲ್ಲ ಬ್ಯಾಂಕ್​ಗಳಿಗೂ ಸಹ ವಾರದಲ್ಲಿ ಐದೇ ದಿನ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕು. ಈ ವಿಚಾರವಾಗಿ ಕೇಂದ್ರ ಸರ್ಕಾರ ತ್ವರಿತವಾಗಿ ಆದೇಶ ಹೊರಡಿಸಬೇಕು. ಇದು ಯುನೈಟೆಡ್​ ಫೋರಂ ಆಫ್​ ಬ್ಯಾಂಕ್​ ಯೂನಿಯನ್ಸ್​ನ ಆಗ್ರಹವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಸೂರಜ್​ ಆರ್​. ಉಪ್ಪೂರು, ವಿಶಾಲ್​ ಸಿಂಗ್​, ರೋಹಿತ್​, ಸಾಯಿಪ್ರಿಯಾ, ದುರ್ಗಾಪ್ರಸಾದ್​ ಶೆಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net