ಹೆಬ್ರಿ ಅನಂತಪದ್ಮನಾಭ ದೇವಸ್ಥಾನ ಉಳಿಸಿ ಅಭಿಯಾನ

ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನವನ್ನು ಉಳಿಸಿಕೊಡುವಂತೆ ಅಭಿಯಾನದ ಮೂಲಕ ಹೆಬ್ರಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಹೆಬ್ರಿ ತಾರಾನಾಥ ಬಲ್ಲಾಳ್, ಭಕ್ತರು ಉಪಸ್ಥಿತರಿದ್ದರು.
ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನವನ್ನು ಉಳಿಸಿಕೊಡುವಂತೆ ಅಭಿಯಾನದ ಮೂಲಕ ಹೆಬ್ರಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಹೆಬ್ರಿ ತಾರಾನಾಥ ಬಲ್ಲಾಳ್, ಭಕ್ತರು ಉಪಸ್ಥಿತರಿದ್ದರು.
Published on
ಹೆಬ್ರಿ: ಹೆಬ್ರಿಯಲ್ಲಿ ಹಾದು ಹೋಗುವ 169ಎ ಉಡುಪಿ- ಹೆಬ್ರಿ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಗಾಗಿ ಪಕ್ಕದಲ್ಲಿರುವ ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾಗವು ಹೋಗಲಿದ್ದು, ಅನಂತಪದ್ಮನಾಭ ದೇವಾಲಯದ ವಾಸ್ತುವಿಗೆ ಯಾವುದೇ ತೊಂದರೆಯಾಗದಂತೆ ‘ದೇವಸ್ಥಾನವನ್ನು ಉಳಿಸಿ’ ಎಂಬ ೋಷಣೆಯೊಂದಿಗೆ ನೂರಾರು ಮಂದಿ ಭಕ್ತರು ಹೆಬ್ರಿ ತಾಲೂಕು ಆಡಳಿತಕ್ಕೆ ಗುರುವಾರ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.
ದೇವಸ್ಥಾನದಲ್ಲಿ ಸೇರಿದ ನೂರಾರು ಮಂದಿ ಭಕ್ತರು ಆಡಳಿತ ಮೊಕ್ತೇಸರ ಹೆಬ್ರಿ ತಾರಾನಾಥ ಬಲ್ಲಾಳ್ ನೇತೃತ್ವದಲ್ಲಿ ಸಲ್ಲಿಸಿದ ಮನವಿಯನ್ನು ಉಪ ತಹಸೀಲ್ದಾರ್ ರಾವೇಂದ್ರ ನಾಯ್ಕ ಸ್ವೀಕರಿಸಿ ಮೇಲಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.

ಭಜನೆಯೊಂದಿಗೆ ಮೆರವಣಿಗೆ

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮನವಿ ಪತ್ರಗಳನ್ನು ಹರಿವಾಣದಲ್ಲಿಟ್ಟು ಪ್ರಸಾದದ ಜತೆಗೆ ತಾಲೂಕು ಆಡಳಿತದ ಅಧಿಕಾರಿಗಳಿಗೆ ಸಲ್ಲಿಸಲಾಯಿತು. ಭಕ್ತ ಸಮೂಹ ಭಜನೆ ವಾಡಿಕೊಂಡು ಮೆರವಣಿಗೆಯಲ್ಲಿ ಸಾಗಿ ಬಂದರು. ದೇವಸ್ಥಾನ ಉಳಿಸಿ ಹೋರಾಟಕ್ಕೆ ಕೈಜೋಡಿಸಿದ ಭಕ್ತ ಸಮೂಹಕ್ಕೆ ಆಡಳಿತ ಮೋಕ್ತೇಸರ ತಾರಾನಾಥ ಬಲ್ಲಾಳ್ ಕೃತಜ್ಞತೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net