ಜನರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸಲು ಕರೆ

 ಕೋಟತಟ್ಟು ಕಾರಂತ ಕಲಾಭವನದಲ್ಲಿ ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಜನಸಂಪರ್ಕ ಸಭೆ ನಡೆಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ಗ್ರಾ.ಪಂ. ಆಡಳಿತಾಧಿಕಾರಿ ಪ್ರತಾಪ್ ಶೆಟ್ಟಿ ಇದ್ದರು.
ಕೋಟತಟ್ಟು ಕಾರಂತ ಕಲಾಭವನದಲ್ಲಿ ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಜನಸಂಪರ್ಕ ಸಭೆ ನಡೆಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ಗ್ರಾ.ಪಂ. ಆಡಳಿತಾಧಿಕಾರಿ ಪ್ರತಾಪ್ ಶೆಟ್ಟಿ ಇದ್ದರು.
Published on
ಕೋಟ: ಜನಸಂಪರ್ಕ ಸಭೆಗಳು ಜನರು, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಗ್ಗೂಡಿಸುವ ವೇದಿಕೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟತಟ್ಟು ಕಾರಂತ ಕಲಾಭವನದಲ್ಲಿ ಗುರುವಾರ ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಕೋಟದಿಂದ ಸಾಲಿಗ್ರಾಮ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಿವೆ ಹಾಗೂ ಹೆಚ್ಚಿನ ಜನಸಂಚಾರವಿದೆ. ಆದರೆ ಇಲ್ಲಿ ಸರ್ವೀಸ್ ರಸ್ತೆ ಇಲ್ಲದ ಕಾರಣ ಅಪಘಾತಗಳು ಹೆಚ್ಚುತ್ತಿದೆ. ಆದ್ದರಿಂದ ಈ ಭಾಗಕ್ಕೆ ಸರ್ವೀಸ್ ರಸ್ತೆ ನಿರ್ವಾಣವಾಗಬೇಕು ಎಂದು ಜಿ.ಪಂ. ವಾಜಿ ಸದಸ್ಯ ರಾವೇಂದ್ರ ಕಾಂಚನ್ ಬಾರಿಕೆರೆ ಮನವಿ ವಾಡಿದರು. 9-11 ಸಮಸ್ಯೆ ಬಗ್ಗೆ ಪ್ರಶಾಂತ್ ಪಡುಕರೆ ಗಮನಸೆಳೆದರು.
ಅಕ್ರಮ ರೆಸಾರ್ಟ್‌ಗಳ ಕಾರ್ಯನಿರ್ವಹಣೆ ಬಗ್ಗೆ ಗಮನಹರಿಸುವಂತೆ ಹಾಗೂ ಪಡುಕರೆ ಗ್ರಾಮ ಆಡಳಿತಾಧಿಕಾರಿ ಕಚೇರಿ ನಿರ್ಮಿಸುವಂತೆ ರವೀಂದ್ರ ತಿಂಗಳಾಯ ಮನವಿ ವಾಡಿದರು. ಮತ್ಸಾೃಶ್ರಯ ಯೋಜನೆಯ ಕೊನೆಯ ಕಂತಿನ ಹಣ ಪಾವತಿಯಾಗದ ಬಗ್ಗೆ ಶೇಖರ ಮರಕಾಲ ತಿಳಿಸಿದರು. ದಾನಗುಂದು ಅಂಗನವಾಡಿಗೆ ಕೇಂದ್ರಕ್ಕೆ ತೆರಳುವ ರಸ್ತೆಗೆ ಚರಂಡಿ ವ್ಯವಸ್ಥೆ ವಾಡುವಂತೆ ಅಂಗನವಾಡಿ ಶಿಕ್ಷಕಿ ಉಷಾ ಮನವಿ ವಾಡಿದರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು. ಬಾಕಿ ಉಳಿದ ಸಮಸ್ಯೆಗಳಿಗೆ ಕ್ರಮ ಕೈಗೊಳ್ಳುವಂತೆ ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಂದಾಪುರ ಶಾಸಕ ಕಿರಣ್ ಕುವಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ಗ್ರಾ.ಪಂ. ಆಡಳಿತಾಧಿಕಾರಿ ಪ್ರತಾಪ್ ಶೆಟ್ಟಿ, ಮಹೇಶ್ ಇದ್ದರು. ಪಿಡಿಒ ರವೀಂದ್ರ ರಾವ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net