2026ರಿಂದ 2031ರವರೆಗೆ ಜಾರಿಯಾಗಲಿರುವ ನೀತಿಯಡಿ ಒಟ್ಟು ರೂ.1,300.45 ಕೋಟಿ ಮೊತ್ತದ ಬಜೆಟ್ ಚೌಕಟ್ಟಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಬಂಡವಾಳ ಹೂಡಿಕೆ, ಎಡ್ಜ್ ಡೇಟಾ ಸೆಂಟರ್‌ಗಳು, ವಿದ್ಯುತ್ ಮತ್ತು ಡಿಜಿಟಲ್ ಮೂಲಸೌಕರ್ಯ, ಮೌಲ್ಯ ಸರಪಳಿ, ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಹಾಗೂ ಸುಸ್ಥಿರತೆ ಆಧಾರಿತ ಪ್ರೋತ್ಸಾಹಕಗಳಿಗೆ ಆದ್ಯತೆ ನೀಡಲಾಗಿದೆ.