ಮತ್ಸ್ಯಗಂಧ ಎಕ್ಸ್‌ಪ್ರೆಸ್ ಹಾಗೂ ಪಂಚಗಂಗಾ ಎಕ್ಸ್‌ಪ್ರೆಸ್(16596/16595) ರೈಲುಗಳಿಗೆ ಸೇನಾಪುರದಲ್ಲಿ, ಮೆಮು ರೈಲಿಗೆ ಬೈಂದೂರು ತಾಲೂಕಿನ ಬಿಜೂರಿನಲ್ಲಿ ಹಾಗೂ ಮಡಗಾಂವ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮೂಕಾಂಬಿಕಾ ರಸ್ತೆ(ಬೈಂದೂರು) ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಮನವಿ ಮಾಡಿದರು. ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್, ಟಿವಿಸಿ-ಹಜರತ್ ನಿಜಾಮುದ್ದೀನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೊಚ್ಚುವೇಲಿ-ಋಷಿಕೇಶ್ ಎಕ್ಸ್‌ಪ್ರೆಸ್, ಕೊಯಮತ್ತೂರು-ಹಿಸ್ಸಾರ್ ಎಸಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೊಚ್ಚುವೇಲಿ-ಅಮೃತಸರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಎಲ್‌ಟಿಟಿ-ತಿರುವನಂತಪುರಂ ನಾರ್ತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ಮಂಗಳೂರು, ಮೂಡುಬಿದಿರೆ ಭಾಗದ ಪ್ರಯಾಣಿಕರಿಗೆ ಪ್ರಮುಖವಾದ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ ರೈಲುಗಳಿಗೂ ಬೈಂದೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸುವಂತೆ ಒತ್ತಾಯಿಸಿದರು.