

ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಸರ್ಕಾರ, ಇಲಾಖೆ ಪ್ರಾವಾಣಿಕ ಸೇವೆ ನೀಡಬೇಕಿದೆ. ಬಹುದೊಡ್ಡ ತಾಲೂಕು ಕೇಂದ್ರದಲ್ಲಿ ಆಸ್ಪತ್ರೆಯನ್ನು ಮುಚ್ಚಿಸುವ ಸರ್ಕಾರದ ನಡೆ ಕ್ಷೇತ್ರಕ್ಕೆ ವಾಡಿದ ಅನ್ಯಾಯವಾಗಿದೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವೈದ್ಯರು ಹಾಗೂ ಸಿಬ್ಬಂದಿ ವರ್ಗಾವಣೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಬೇಕಿದೆ.
ಪ್ರಸ್ತುತ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ಸೌಲಭ್ಯಗಳಲ್ಲೇ ಉತ್ತಮ ಸೇವೆ ನೀಡಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆಯಿದೆ. ಹೊಸ ನಿಯಮದ ಪ್ರಕಾರ ವೈದ್ಯರು ವರ್ಗಾವಣೆಯಾದರೆ ಭವಿಷ್ಯದಲ್ಲಿ ಬೈಂದೂರು ಕ್ಷೇತ್ರಕ್ಕೆ ಕಾಯಂ ವೈದ್ಯರಿಲ್ಲದಂತಾಗುತ್ತದೆ. ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು. ಸರ್ಕಾರದ ನಿಯಮ ನಾವು ಪಾಲಿಸಬೇಕಿದೆ.
ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರನ್ನು ವರ್ಗಾವಣೆ ಮಾಡುತ್ತಿರುವ ಸರ್ಕಾರದ ನಿಯಮ ಸರಿಯಲ್ಲ. ಮೊದಲು ಸವಲತ್ತು ನೀಡಬೇಕು. ಬಳಿಕ ಸಾರ್ವಜನಿಕರ ಸ್ಪಂದನೆ ನಿರೀಕ್ಷಿಸಬೇಕು. ಸವಲತ್ತು ನೀಡದೆ ಇರುವ ವ್ಯವಸ್ಥೆ ಕಸಿಯುವುದು ಸರ್ಕಾರಕ್ಕೆ ಕಪ್ಪುಚುಕ್ಕೆ. ಬೈಂದೂರು ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ.