

ವಿಜಯವಾಣಿಸುದ್ದಿಜಾಲ ಮೂಡುಬಿದಿರೆ
ನಗರದಹೃದಯಭಾಗದಲ್ಲಿರುವ ಬಸ್ ನಿಲ್ದಾಣದಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದಮುಂಭಾಗದಲ್ಲಿ ಪಾರ್ಕಿಂಗ್ಅವ್ಯವಸ್ಥೆ ಮಿತಿಮೀರಿದೆ.ಪುರಸಭೆಯನಿರ್ಲಕ್ಷ್ಯ ಧೋರಣೆಯಿಂದಾಗಿಇಲ್ಲಿನ ವ್ಯಾಪಾರಸ್ಥರು ಸಂಕಷ್ಟಎದುರಿಸುತ್ತಿದ್ದು,ದಶಕಗಳಸಮಸ್ಯೆಗೆ ಇನ್ನೂ ಮುಕ್ತಿಸಿಕ್ಕಿಲ್ಲ.
ಈಭಾಗದಲ್ಲಿ ಪಾರ್ಕಿಂಗ್ ಸಮಸ್ಯೆಇಂದು ನಿನ್ನೆಯದಲ್ಲ.ಈಬಗ್ಗೆ ಈಗಾಗಲೇ ಹಲವು ಸಭೆಗಳುನಡೆದಿವೆ.ಪೊಲೀಸ್ಸಿಬ್ಬಂದಿ ಹಾಗೂ ಪ್ರತ್ಯೇಕವಾಚ್‌ಮನ್‌ಗಳನ್ನು ನಿಯೋಜಿಸಿದರೂಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ.ನಿಯಮದಂತೆಬಸ್‌ಗಳು ನಿಲ್ಲಬೇಕಾದ ಜಾಗದಲ್ಲಿದ್ವಿಚಕ್ರ ಮತ್ತು ಖಾಸಗಿ ವಾಹನಗಳುಅಡ್ಡಾದಿಡ್ಡಿಯಾಗಿ ನಿಲ್ಲುತ್ತಿರುವುದುಈ ಗೊಂದಲಕ್ಕೆ ಮುಖ್ಯ ಕಾರಣ.
ಈವಾಣಿಜ್ಯ ಸಂಕೀರ್ಣದ ವರ್ತಕರುಪ್ರತಿ ತಿಂಗಳು ಪುರಸಭೆಗೆ ಒಟ್ಟು4,35,381ರೂ.ಗಳಷ್ಟುಬೃಹತ್ ಮೊತ್ತದ ಬಾಡಿಗೆಪಾವತಿಸುತ್ತಿದ್ದಾರೆ.ಪಾರ್ಕಿಂಗ್ಕಿರಿಕಿರಿ ಕಾರಣದಿಂದ ಗ್ರಾಹಕರುಅಂಗಡಿಗಳಿಗೆ ಬರಲು ಹಿಂದೇಟುಹಾಕುತ್ತಿದ್ದಾರೆ.ಸಮಸ್ಯೆಬಗೆಹರಿಸುವಂತೆ ವ್ಯಾಪಾರಸ್ಥರುಸಲ್ಲಿಸಿದ ನೂರಾರು ಮನವಿಗಳುಪುರಸಭೆಯ ಕಡತಗಳಲ್ಲಿ ಧೂಳುಹಿಡಿಯುತ್ತಿವೆ ಹೊರತು,ಯಾವುದೇಕ್ರಮ ಕೈಗೊಂಡಿಲ್ಲ.
ಪಾರ್ಕಿಂಗ್ಅವ್ಯವಸ್ಥೆಯ ಹಿನ್ನೆಲೆಯಲ್ಲಿಬಸ್ ಮಾಲೀಕರು ಏ.1ರಿಂದಅನ್ವಯವಾಗುವಂತೆ ಈ ಸಂಕೀರ್ಣದಮುಂದಿನ ಬಸ್ ನಿಲುಗಡೆ ರದ್ದುಗೊಳಿಸಲುನಿರ್ಧರಿಸಿದ್ದಾರೆ.ಕೇವಲ‘ಟೈಮಿಂಗ್ಸ್’ಹೊಂದಾಣಿಕೆಗಾಗಿಮಾತ್ರ ಬಸ್ ನಿಲ್ಲಿಸಲು ಸ್ವಯಂತೀರ್ಮಾನ ಕೈಗೊಂಡಿರುವುದುವ್ಯಾಪಾರಸ್ಥರಿಗೆ ಗಾಯದ ಮೇಲೆಬರೆ ಎಳೆದಂತಾಗಿದೆ.ಬಸ್‌ಗಳುನಿಲ್ಲದಿದ್ದರೆ ಜನರ ಓಡಾಟ ಕಡಿಮೆಯಾಗಿನಮ್ಮ ವ್ಯಾಪಾರ ಸಂಪೂರ್ಣ ನೆಲಕಚ್ಚಲಿದೆ.ಈರೀತಿ ಏಕಪಕ್ಷೀಯ ತೀರ್ಮಾನತೆಗೆದುಕೊಳ್ಳಲು ಬಸ್ ಮಾಲೀಕರಿಗೆಅಧಿಕಾರ ನೀಡಿದವರು ಯಾರು?ಎಂದುವರ್ತಕರು ಪ್ರಶ್ನಿಸಿದ್ದಾರೆ.ಪುರಸಭೆಕೂಡಲೇ ಮಧ್ಯಪ್ರವೇಶಿಸಿ ಅನ್ಯಾಯತಡೆಯಬೇಕು ಎಂಬುದು ಸ್ಥಳೀಯರಆಗ್ರಹ.