ದಾನಿಗಳನ್ನು ಗೌರವಿಸುವುದು ಧರ್ಮ

ಉಡುಪಿಯ ತಾಯಿ ಮತ್ತು ಮಕ್ಕಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ವೈದ್ಯಕಿಯ ಪರಿಕರಗಳನ್ನು ಕೊಡುಗೆ ನೀಡಿದ ಆನಂದ್​ ಕುಂದರ್​ ದಂಪತಿಯನ್ನು ಸನ್ಮಾನಿಸಲಾಯಿತು. ಡಾ. ಎಚ್​.ಅಶೋಕ್​, ಡಾ. ಸಂದೀಪ್​, ಡಾ. ಮಹಾದೇವ್​ ಭಟ್​, ಡಾ. ಅಮರನಾಥ ಶಾಸ್ತ್ರಿ, ಡಾ. ಶಶಾಂಕ್​, ರೇಣುಕಾ, ಮನು ಎಸ್​.ಬಿ., ಪ್ರಕಾಶ್​ ಎಸ್​. ಉಪಸ್ಥಿತರಿದ್ದರು.
ಉಡುಪಿಯ ತಾಯಿ ಮತ್ತು ಮಕ್ಕಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ವೈದ್ಯಕಿಯ ಪರಿಕರಗಳನ್ನು ಕೊಡುಗೆ ನೀಡಿದ ಆನಂದ್​ ಕುಂದರ್​ ದಂಪತಿಯನ್ನು ಸನ್ಮಾನಿಸಲಾಯಿತು. ಡಾ. ಎಚ್​.ಅಶೋಕ್​, ಡಾ. ಸಂದೀಪ್​, ಡಾ. ಮಹಾದೇವ್​ ಭಟ್​, ಡಾ. ಅಮರನಾಥ ಶಾಸ್ತ್ರಿ, ಡಾ. ಶಶಾಂಕ್​, ರೇಣುಕಾ, ಮನು ಎಸ್​.ಬಿ., ಪ್ರಕಾಶ್​ ಎಸ್​. ಉಪಸ್ಥಿತರಿದ್ದರು.
Published on

ಉಡುಪಿ ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​ ಅಭಿಪ್ರಾಯ

* ಗೀತಾನಂದ ಫೌಂಡೇಷನ್​ನಿಂದ ವೈದ್ಯಕೀಯ ಪರಿಕರ ಕೊಡುಗೆ

ಉಡುಪಿ: ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕೋಟದ ಗೀತಾನಂದ ಫೌಂಡೇಷನ್​ನ ಪ್ರವರ್ತಕ ಆನಂದ್​ ಕುಂದರ್​ ಅವರು 5 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ವೈದ್ಯಕೀಯ ಅಗತ್ಯ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಬಡ ಜನರ ಆರೋಗ್ಯ ಸೇವೆಗೆ ಸಹಕಾರ ನೀಡಿರುವ ದಾನಿಗಳನ್ನು ಗೌರವಿಸುವುದು ನಮ್ಮ ಧರ್ಮ. ಸರ್ಕಾರಿ ಆಸ್ಪತ್ರೆಯೆಂಬ ತಾತ್ಸಾರ ಬೇಡ. ಇಲ್ಲಿಯೂ ಸಹ ಉತ್ತಮ ಸೇವೆ ಲಭ್ಯವಿದೆ ಎಂದು ಉಡುಪಿ ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​ ತಿಳಿಸಿದರು.
ಉಡುಪಿ ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ (ಜೂ.26) ಸಂಜೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಆನಂದ್​ ಕುಂದರ್​ ದಂಪತಿಯನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಸೇವೆಯಿಂದ ಹೆಚ್ಚಿನ ತೃಪ್ತಿ
ಉದ್ಯಮಿ ಆನಂದ ಕುಂದರ್​ ಮಾತನಾಡಿ, ಗೀತಾನಂದ ಫೌಂಡೇಷನ್​ನ ಸಿಎಸ್​ಆರ್​ ನಿಧಿಯಿಂದ ಸಾಮಾಜಿಕ ಸೇವೆ ಮಾಡಲಾಗುತ್ತಿದೆ. ಪರಿಸರದ ರಕ್ಷಣೆಗಾಗಿ ವಾರ್ಷಿಕ 10 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು, ಅವುಗಳಿಗೆ ವಾರಕ್ಕೊಮ್ಮೆ ವಾಹನದ ಮೂಲಕ ನೀರು ಹಾಕಲಾಗುತ್ತದೆ. ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ನೀಡುವ ಕೊಡುಗೆ, ಸೇವೆಯಿಂದ ನನ್ನ ಮನಸ್ಸಿಗೆ ಹೆಚ್ಚಿನ ತೃಪ್ತಿ ಲಭಿಸುತ್ತದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಗೂ ಅನಾರೋಗ್ಯಕ್ಕೆ ತುತ್ತಾದ ಬಡವರಿಗೂ ಸಹ ಆರ್ಥಿಕ ಸಹಕಾರ ನೀಡುತ್ತಿರುವುದಾಗಿ ತಿಳಿಸಿದರು.

ಪರಿಕರಗಳ ಉದ್ಘಾಟನೆ

ಆಸ್ಪತ್ರೆಯ ಒಟಿ ಹಾಗೂ ಲೇಬರ್​ ರೂಂಗೆ ಕೊಡುಗೆಯಾಗಿ ನೀಡಿದ ಒಟಿ ಸರ್ಜಿಕಲ್​ ಲೈಟ್ಸ್​, ಎಲ್​ಟಿ ಲೈಟ್ಸ್​, ಸರ್ಜರಿಗೆ ಬೇಕಾದ ಉಪಕರಣ, ಮಗುವಿನ ಹೃದಯ ಬಡಿತ ತಪಾಸಣೆಯ ಯಂತ್ರ ಹಾಗೂ ಇನ್ನಿತರ ಅಗತ್ಯ ಪರಿಕರಗಳನ್ನು ಆನಂದ್​ ಕುಂದರ್​ ಉದ್ಘಾಟಿಸಿದರು.  
ಸ್ಪತ್ರೆಯ ಮಕ್ಕಳ ತಜ್ಞ ಹಾಗೂ ಆಡಳಿತಾಧಿಕಾರಿ ಡಾ. ಸಂದೀಪ್​, ಮಕ್ಕಳ ತಜ್ಞ ಡಾ. ಮಹಾದೇವ್​ ಭಟ್​, ಡಾ. ಅಮರನಾಥ ಶಾಸ್ತ್ರಿ, ಪ್ರಸೂತಿ ತಜ್ಞ ಡಾ. ಶಶಾಂಕ್​, ನರ್ಸಿಂಗ್​ ಅಧಿಕಾರಿ ರೇಣುಕಾ ಉಪಸ್ಥಿತರಿದ್ದರು.
ಮೆಡ್​ ಮಾರ್ಕ್​ನ ಸುಧೀರ್​ ಮತ್ತು ಪ್ರಕಾಶ್​, ಆಸ್ಪತ್ರೆಯ ಇಂಜಿನಿಯರ್​ ಪ್ರಕಾಶ್​ ಎಸ್​., ಬಯೋಮೆಡಿಕಲ್​ ಇಂಜಿನಿಯರ್​ ಸುಮಿತ್​ ಎಸ್​. ಶೆಟ್ಟಿ, ಆಸ್ಪತ್ರೆಯ ಶುಶ್ರೂಷಣಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡಿದ್ದರು. 
ಆಸ್ಪತ್ರೆಯ ಸ್ಟಾಫ್ ನರ್ಸ್​ ತುಳಸಿಮಣಿ ಪ್ರಾರ್ಥಿಸಿದರು. ಅಜ್ಜರಕಾಡು ಜಿಲ್ಲಾಸ್ಪತ್ರೆಯ ಆಪ್ತ ಸಮಾಲೋಚಕ ಮನು ಎಸ್​.ಬಿ. ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net