ತಂಗುದಾಣಗಳಲ್ಲಿ ನಿಲ್ಲದ ಬಸ್‌ಗಳು

 ಕಾಸರಗೋಡಿನಲ್ಲಿ ನಿಲ್ದಾಣವಿದ್ದರೂ ಬಸ್‌ಗಳು ಬೇರೆ ಕಡೆ ನಿಂತಿರುವುದು.
ಕಾಸರಗೋಡಿನಲ್ಲಿ ನಿಲ್ದಾಣವಿದ್ದರೂ ಬಸ್‌ಗಳು ಬೇರೆ ಕಡೆ ನಿಂತಿರುವುದು.
Published on
ಬದಿಯಡ್ಕ: ವಿದ್ಯಾನಗರ ಮತ್ತು ಕಲೆಕ್ಟರೇಟ್ ಜಂಕ್ಷನ್‌ನಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ವಿವಿಧೆಡೆ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ವಿದ್ಯಾನಗರ ಮತ್ತು ಕಲೆಕ್ಟರೇಟ್ ಜಂಕ್ಷನ್‌ನಲ್ಲಿ ತಂಗುದಾಣವಿದ್ದರೂ ಬಸ್‌ಗಳನ್ನು ನಿಲ್ಲಿಸದೆ ಅಂಡರ್ ಪಾಸ್ ಸಮೀಪ ನಿಲ್ಲಿಸುತ್ತಾರೆ ಎಂದು ನಗರಸಭೆ ವಾಜಿ ಕೌನ್ಸಿಲರ್ ಮಜೀದ್ ಕೊಲ್ಲಂಪಾಡಿ ಸಂಚಾರಿ ಠಾಣೆಗೆ ದೂರು ನೀಡಿದ್ದಾರೆ.

ಅಪಾಯ ಮತ್ತು ಸಂಚಾರ ದಟ್ಟಣೆ

ನಿಲ್ದಾಣಗಳಲ್ಲಿ ನಿಲ್ಲುವ ಬದಲು ಸರ್ವಿಸ್ ರಸ್ತೆಗಳ ಇತರ ಭಾಗಗಳಲ್ಲಿ ಬಸ್‌ಗಳು ನಿಲ್ಲುವುದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಂಡರ್‌ಪಾಸ್‌ಗಳ ಬಳಿ ಬಸ್‌ಗಳನ್ನು ನಿಲ್ಲಿಸುವುದರಿಂದ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು ಅಪಾಯಕ್ಕೂ ಕಾರಣವಾಗಿದೆ. ಬಸ್ ಹತ್ತಲು ಪ್ರಯಾಣಿಕರು ಓಡಬೇಕಾಗುತ್ತದೆ. ವೃದ್ಧರು, ಮಕ್ಕಳಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದೆ.
ಪೊಲೀಸರಿಗೆ ದೂರು: ಕಾಸರಗೋಡು ನಗರಸಭೆ ವಾಜಿ ಕೌನ್ಸಿಲರ್ ಮಜೀದ್ ಕೊಲ್ಲಂಪಾಡಿ ಈ ಬಗ್ಗೆ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಸ್‌ಗಳು ಕಾನೂನು ಉಲ್ಲಂಸಿ ನಿಲ್ದಾಣಗಳಿಂದ ಹೊರ ಭಾಗದಲ್ಲಿ ನಿಲ್ಲುತ್ತಿರುವ ಬಗ್ಗೆ ಸಾಕ್ಷ್ಯಾಧಾರಗಳೊಂದಿಗೆ ದೂರು ದಾಖಲಿಸಿ, ಕಾನೂನು ಉಲ್ಲಂಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net