ಬಸ್‌ಗಳು ಬಾರದೆ ನಿಲ್ದಾಣ ಭಣಭಣ

ಬೈಂದೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳನೋಟ
ಬೈಂದೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳನೋಟ
Published on
ವಿಜಯವಾಣಿ ಸುದ್ದಿಜಾಲ ಬೈಂದೂರು
ಬೈಂದೂರು ತಾಲೂಕಿನ ಬಹುಬೇಡಿಕೆಯ, ಮಹತ್ವಾಕಾಂಕ್ಷಿ ಯೋಜನೆಯಾದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಯಡ್ತರೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಸಾರಿಗೆ ಸಚಿವರು ಲೋಕಾರ್ಪಣೆ ಮಾಡಿದ್ದರು. 9 ವರ್ಷಗಳ ಸುದೀರ್ಘ ಅವಧಿಯಲ್ಲಿ ಎರಡೆರಡು ಬಾರಿ ಶಂಕುಸ್ಥಾಪನೆಗೊಂಡ ನಿಲ್ದಾಣಕ್ಕೆ ಕೊನೆಗೂ ಉದ್ಘಾಟನೆ ಭಾಗ್ಯವೇನೋ ದೊರೆಯಿತು. ಆದರೆ ಬಸ್‌ಗಳು ನಿಲ್ದಾಣಕ್ಕೆ ಬಾರದೆ ಭಣಗುಡುತ್ತಿದೆ. ಪ್ರಯಾಣಿಕರು ಬಸ್‌ಗಳಿಗಾಗಿ ಕಾದುಕಾದು ಹೈರಾಣಾಗುತ್ತಿದ್ದಾರೆ.
ಶಿರಸಿ, ಅಂಕೋಲಾ, ಕಾರವಾರ, ಹುಬ್ಬಳ್ಳಿ, ಹಾವೇರಿ ಕಡೆಯಿಂದ ಮಂಗಳೂರು, ಉಡುಪಿ ಕಡೆಗೆ ಬರುವ ಬಸ್‌ಗಳು ನಿಲ್ದಾಣಕ್ಕೆ ಬರುತ್ತವೆ. ಆದರೆ ಮಂಗಳೂರು, ಉಡುಪಿ ಕಡೆಯಿಂದ ಬರುವ ಬಸ್‌ಗಳು ಯಡ್ತರೆ ಬಸ್ ನಿಲ್ದಾಣದ ಒಳಗೆ ಬಾರದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಯಡ್ತರೆ ಬಳಿ ಸರ್ವೀಸ್ ರಸ್ತೆ ಇಲ್ಲದಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಒಂದು ವೇಳೆ ಬಸ್‌ಗಳು ಬರಬೇಕಿದ್ದರೂ ರಾಷ್ಟ್ರೀಯ ಹೆದ್ದಾರಿ ಮೂಲಕ ಬೈಂದೂರು ತಾಲೂಕು ಕಚೇರಿ ಬಳಸಿಕೊಂಡು ಮೂರು ಕಿಲೋ ಮೀಟರ್ ಸುತ್ತಿ ಬರಬೇಕಾದ ಕಾರಣ ಬಸ್‌ಗಳು ಯಡ್ತರೆ ನಿಲ್ದಾಣಕ್ಕೆ ಬಾರದೆ ನೇರವಾಗಿ ಹೋಗುತ್ತಿವೆ.

ಡೈವಡರ್ ಇಲ್ಲದೆ ಸಮಸ್ಯೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಸ್ ನಿಲ್ದಾಣದ ಬಳಿ ಡಿವೈಡರ್ ಕೊಡದ ಕಾರಣ ಬಸ್‌ಗಳು ನಿಲ್ದಾಣ ಪ್ರವೇಶಿಸುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಹೆದ್ದಾರಿಯ ಎರಡೂ ಕಡೆ ಯಡ್ತರೆ ಜಂಕ್ಷನ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವರೆಗೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಿದರೆ ಬಸ್‌ಗಳು ನಿಲ್ದಾಣ ಪ್ರವೇಶಿಸಲು ಅನುಕೂಲವಾಗುತ್ತದೆ. ಈ ಸಮಸ್ಯೆ ಹೀಗೇ ಮುಂದುವರಿದಲ್ಲಿ 8.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ಬಸ್ ನಿಲ್ದಾಣ ಮೂಲೆಗುಂಪಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಂಬಂಧಪಟ್ಟವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ವಾತನಾಡಿ ಸಮನ್ವಯತೆ ಸಾಧಿಸಿಕೊಂಡು ಸಮಸ್ಯೆ ಬಗೆಹರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.

ಬೈಂದೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರಾಸಿಂಗ್ ವ್ಯವಸ್ಥೆ ಕಲ್ಪಿಸದ ಕಾರಣ ಕುಂದಾಪುರ ಭಾಗದಿಂದ ಆಗಮಿಸುವ ಬಸ್‌ಗಳು ನಿಲ್ದಾಣದೊಳಗೆ ಪ್ರವೇಶಿಸುತ್ತಿಲ್ಲ. ಇಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆ ವಾತುಕತೆ ನಡೆಸಲಾಗಿದೆ. ಮಂಗಳೂರು ಕಡೆಯಿಂದ ಭಟ್ಕಳ ಕಡೆ ಬರುವ ಬಸ್‌ಗಳು ನಿಲ್ದಾಣಕ್ಕೆ ಬರುವಂತೆ ಶ್ರೀದಲ್ಲೇ ವ್ಯವಸ್ಥೆ ವಾಡಲಾಗುವುದು.

ಬೈಂದೂರು ಯಡ್ತರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ತೆರವು ವಾಡಿಕೊಡುವ ಹಾಗೂ ಹೆದ್ದಾರಿಯ ಎರಡೂ ಮಗ್ಗುಲಲ್ಲಿಯೂ ಯಡ್ತರೆ ಜಂಕ್ಷನ್‌ನಿಂದ ಬಸ್ ನಿಲ್ದಾಣದವರೆಗೆ ಸರ್ವೀಸ್ ರಸ್ತೆ ನಿರ್ಮಿಸುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ವಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net