ಟೈಮಿಂಗ್ಸ್ ವಿಚಾರದಲ್ಲಿ ಉದ್ಯಾವರದಿಂದಲೇ ಆರೋಪ ಪ್ರತ್ಯಾರೋಪಗಳು ಕಂಡುಬಂದಿದ್ದು, ಕಾಪು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಲು ನಿಲ್ಲಿಸಿದ್ದ ವೇಳೆ ಆಕ್ರೋಶ ಸ್ಫೋಟಗೊಂಡಿದೆ. ಪರಸ್ಪರ ಬಸ್‌ಗಳನ್ನು ಡಿಕ್ಕಿ ಹೊಡೆದು ಕೈಕೈ ಮಿಲಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಭಂಗವುಂಟು ಮಾಡಿದ್ದಾರೆ.