ಮರದಿಂದ ಬಿದ್ದು ಗಾಯಗೊಂಡಿದ್ದ ಬಸ್ ಚಾಲಕ ಮೃತ್ಯು

Death
Death
Published on
ಕಾಸರಗೋಡು: ವರ್ಕಾಡಿ ನೀರೊಳಿಕೆಯಲ್ಲಿ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಸ್ ಚಾಲಕ ಅವಿನಾಶ್ ನಾಯಕ್(32) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮಂಗಳೂರು ಕುಲಶೇಖರದ ಕಕ್ಕೆಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮಂಗಳೂರು-ಬೆಳಗಾವಿ ಮಾರ್ಗದ ಖಾಸಗಿ ಬಸ್ ಚಾಲಕರಾಗಿದ್ದ ಅವರು ನೀರೊಳಿಕೆಯಲ್ಲಿರುವ ಪತ್ನಿ ಮನೆಗೆ ಬಂದಿದ್ದರು.
ಹಲಸಿನಕಾಯಿ ಕೊಯ್ಯಲೆಂದು ಮರ ಹತ್ತಿದ್ದಾಗ ಆಯತಪ್ಪಿ ಬಿದ್ದಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net