ವಡೇರಹೋಬಳಿ ಗ್ರಾಮದ ಗದ್ದೆಯಲ್ಲಿರುವ ಪಾಳು ಬಿದ್ದ ಬಾವಿಗೆ ಬಿದ್ದಿದ್ದ ಗೂಳಿಯೊಂದನ್ನು ಕುಂದಾಪುರ ಅಗ್ನಿಶಾಮಕ ಠಾಣೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಸಾರ್ವಜನಿಕರ ಸಹಕಾರ
ಸುಮಾರು 4 ಅಡಿ ಅಗಲ ಹಾಗೂ 25 ಅಡಿ ಆಳವಿರುವ ಇಕ್ಕಟ್ಟಾದ ಬಾವಿಗೆ ಬಿದ್ದ ಗೂಳಿಯನ್ನು ರಕ್ಷಣಾ ಉಪಕರಣಗಳನ್ನು ಬಳಸಿ, ಸಾರ್ವಜನಿಕರ ಸಹಕಾರದೊಂದಿಗೆ ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಲಾಯಿತು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ತಂಡ ಭಾಗಿ:
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ವಿ.ಸುಂದರ್, ಸಹಾಯಕ ಠಾಣಾಧಿಕಾರಿ ಕೆ.ಎಲ್.ಹೊಸರತ್ತಿ, ಪ್ರಮುಖ ಪೈರ್ ಪೈಟರ್ ಸಿಬ್ಬಂದಿಗಳಾದ ಬಾಲಕೃಷ್ಣ, ಸತೀಶ್ ಶೆಣೈ, ಅಭಿಷೇಕ ಢಂಗ ಮತ್ತು ರಿಯಾಜ ಪಟೇಲ ಹಾಗೂ ಅಗ್ನಿಶಾಮಕ ಚಾಲಕ ಬಸವರಾಜ ಹಳ್ಳದಗೆಣ್ಣೂರ ಪಾಲ್ಗೊಂಡಿದ್ದರು.