ಬಡವರಿಗೆ ಮನೆ ನಿರ್ಮಾಣ ಬ್ರಹ್ಮಕಲಶೋತ್ಸವಕ್ಕೆ ಸಮಾನ

ಉಡುಪಿ ಹಿರಿಯಡ್ಕದಲ್ಲಿ ವಿದ್ಯಾಪೋಷಕ್​ ವಿದ್ಯಾರ್ಥಿ ಅಂಕಿತನಿಗೆ ನಿರ್ಮಿಸಿಕೊಟ್ಟ ಮನೆಯನ್ನು ದಾನಿ ಎ. ರಘುಪತಿ ಭಟ್​ ಉದ್ಘಾಟಿಸಿದರು. ಗುರ್ಮೆ ಸುರೇಶ ಶೆಟ್ಟಿ, ಕುದಿ ಶ್ರೀನಿವಾಸ ಭಟ್​, ಶ್ರೀನಿವಾಸ ರಾವ್​, ಹೆರ್ಗ ದಿನಕರ ಶೆಟ್ಟಿ, ಯು.ವಿಶ್ವನಾಥ ಶೆಣೈ, ಪ್ರಭಾವತಿ ವಿ. ಶೆಣೈ, ಕೃಷ್ಣರಾಜ ತಂತ್ರಿ, ಸವಿತಾ, ಸಂಜನಾ, ಎಂ. ಗಂಗಾಧರ ರಾವ್​, ವಿ.ಜಿ. ಶೆಟ್ಟಿ, ಕೆ. ಸದಾಶಿವ ರಾವ್​, ಮುರಳಿ ಕಡೆಕಾರು, ನಾರಾಯಣ ಹೆಗಡೆ ಉಪಸ್ಥಿತರಿದ್ದರು.
ಉಡುಪಿ ಹಿರಿಯಡ್ಕದಲ್ಲಿ ವಿದ್ಯಾಪೋಷಕ್​ ವಿದ್ಯಾರ್ಥಿ ಅಂಕಿತನಿಗೆ ನಿರ್ಮಿಸಿಕೊಟ್ಟ ಮನೆಯನ್ನು ದಾನಿ ಎ. ರಘುಪತಿ ಭಟ್​ ಉದ್ಘಾಟಿಸಿದರು. ಗುರ್ಮೆ ಸುರೇಶ ಶೆಟ್ಟಿ, ಕುದಿ ಶ್ರೀನಿವಾಸ ಭಟ್​, ಶ್ರೀನಿವಾಸ ರಾವ್​, ಹೆರ್ಗ ದಿನಕರ ಶೆಟ್ಟಿ, ಯು.ವಿಶ್ವನಾಥ ಶೆಣೈ, ಪ್ರಭಾವತಿ ವಿ. ಶೆಣೈ, ಕೃಷ್ಣರಾಜ ತಂತ್ರಿ, ಸವಿತಾ, ಸಂಜನಾ, ಎಂ. ಗಂಗಾಧರ ರಾವ್​, ವಿ.ಜಿ. ಶೆಟ್ಟಿ, ಕೆ. ಸದಾಶಿವ ರಾವ್​, ಮುರಳಿ ಕಡೆಕಾರು, ನಾರಾಯಣ ಹೆಗಡೆ ಉಪಸ್ಥಿತರಿದ್ದರು.
Published on: 

* ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್​ ಅನಿಸಿಕೆ

* ಯಕ್ಷಗಾನ ಕಲಾರಂಗದ 108ನೇ ಮನೆ ಹಸ್ತಾಂತರ

ಉಡುಪಿ: ಯಕ್ಷಗಾನ ಕಲಾರಂಗ ಕಲೆಯ ಸಂರಕ್ಷಣೆಯೊಂದಿಗೆ ವಿದ್ಯಾಪೋಷಕ್​ ಯೋಜನೆಯಡಿ ಬಡ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಲ್ಲಿ ಸೂರು ನಿರ್ಮಿಸಿಕೊಡುತ್ತಿದೆ. ಅವರ ಈ ಕೆಲಸ ಬ್ರಹ್ಮಕಲಶೋತ್ಸವ ಮಾಡಿಸಿದಷ್ಟೇ ಪುಣ್ಯಕ್ಕೆ ಸಮಾನವಾದ ಕಾರ್ಯವಾಗಿದೆ. ಸಂಸ್ಥೆಯ ಕಾರ್ಯಚಟುವಟಿಕೆ ವಿಶಿಷ್ಟವಾಗಿದ್ದು, ಎಲ್ಲರಿಗೂ ಮೆಚ್ಚುಗೆಯಾಗುತ್ತದೆ ಎಂದು ಹಿರಿಯಡ್ಕದ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್​ ಅನಿಸಿಕೆ ವ್ಯಕ್ತಪಡಿಸಿದರು.

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್​ನ ಪ್ರಥಮ ಪಿಯುಸಿ ವಿದ್ಯಾರ್ಥಿ, ಅನಿತಾ ಮತ್ತು ಗೋಪಾಲ ದಂಪತಿ ಪುತ್ರ ಅಂಕಿತನಿಗೆ ಹಿರಿಯಡ್ಕದ ಕೊಂಡಾಡಿಯಲ್ಲಿ ಅಲೆವೂರಿನ ಎ. ರಘುಪತಿ ಭಟ್​ ತನ್ನ 84ನೇ ಜನ್ಮದಿನ ಹಾಗೂ ತಂದೆ ವಾಸುದೇವ ಭಟ್​, ತಾಯಿ ರುಕ್ಮಿಣಿಯಮ್ಮ, ಸಹೋದರಿ ಶಶಿಕಲಾ ತಂತ್ರಿ, ಪತ್ನಿ ರತ್ನಾ ಸ್ಮರಣಾರ್ಥ ನಿರ್ಮಿಸಿಕೊಟ್ಟ ನೂತನ ಮನೆ 'ಶಶಿರತ್ನ' ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಾನಿ ರಘುಪತಿ ಭಟ್​ ಮನೆಯೊಳಗೆ ದೀಪ ಬೆಳಗಿದರು.
ದಾನಿ ರಘುಪತಿ ಭಟ್​ ಮನೆಯೊಳಗೆ ದೀಪ ಬೆಳಗಿದರು.

ದಾನಿ ರಘುಪತಿ ಭಟ್​ ಮನೆಯೊಳಗೆ ದೀಪ ಬೆಳಗಿ ಮಾತನಾಡಿ, ತಂದೆ-ತಾಯಿ, ಪತ್ನಿ ಮತ್ತು ಸಹೋದರಿ ನನ್ನ ಬದುಕಿನ ಬೇರೆ ಬೇರೆ ಕಾಲಘಟ್ಟದಲ್ಲಿ ಆಸರೆಯಾಗಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞ. ಆಶ್ರಯದಾನಕ್ಕೆ ವಿಶೇಷ ಮಹತ್ವವಿದ್ದು, ಆ ಸಂತಸ ಇಂದು ದಕ್ಕಿದೆ. ಯಕ್ಷಗಾನ ಕಲಾರಂಗವು ಸುಮನಸ್ಕರ ಕೂಟ. ನನಗೆ ಏನೂ ಶ್ರಮವಿಲ್ಲದೆ ಸುಂದರ ಮನೆ ನಿರ್ಮಿಸಿಕೊಟ್ಟಿದ್ದು, ಇಲ್ಲಿ ಅಂಕಿತನು ತಂದೆ-ತಾಯಿಯೊಂದಿಗೆ ಸುಖವಾಗಿರಲೆಂದು ಹಾರೈಸಿದರು.

ಕೆಪಿಎಸ್​ ಹಿರಿಯಡ್ಕದ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್​, ಹೆರ್ಗ ದಿನಕರ ಶೆಟ್ಟಿ, ಪ್ರಭಾವತಿ ವಿ. ಶೆಣೈ ಮಾತನಾಡಿದರು.

ಯು.ವಿಶ್ವನಾಥ ಶೆಣೈ, ಕೃಷ್ಣರಾಜ ತಂತ್ರಿ, ಸವಿತಾ, ಸಂಜನಾ, ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್​ ಉಪಸ್ಥಿತರಿದ್ದರು. ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಆಗಮಿಸಿ ಶುಭಹಾರೈಸಿ ಸಹಭೋಜನದಲ್ಲಿ ಪಾಲ್ಗೊಂಡರು.

ಸಂಸ್ಥೆಯ ಸದಸ್ಯರಾದ ವಿಜಯಕುಮಾರ್​ ಮುದ್ರಾಡಿ, ಭುವನಪ್ರಸಾದ ಹೆಗ್ಡೆ, ಯು.ಅನಂತರಾಜ ಉಪಾಧ್ಯ, ಹಿರಿಯಣ್ಣ ಕಿದಿಯೂರು, ಎ.ನಾಗಭೂಷಣ ಭಟ್​, ಮರ್ಣೆ ಉಮೇಶ ಭಟ್​, ಆರ್​.ವಸಂತ, ಡಾ. ರಾಘವೇಂದ್ರ ರಾವ್​, ಡಾ. ಪ್ರತಿಮಾ ಜೆ. ಆಚಾರ್ಯ, ಸುದರ್ಶನ ಬಾಯರಿ, ಸನಕ ಎಂ. ಕಡೆಕಾರು, ಪ್ರಸನ್ನ ಹೆಗಡೆ, ಭರತ ಶೆಟ್ಟಿ ಪಾಲ್ಗೊಂಡಿದ್ದರು.

ಬೆಳಗ್ಗೆ ವೇದಮೂರ್ತಿ ಸೀತಾರಾಮ ಭಟ್ಟ ನೇತೃತ್ವದಲ್ಲಿ ಗಣಹೋಮ ನಡೆಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿದರು. ಸಹಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರು ಕಾರ್ಯಕ್ರಮ ನಿರ್ವಹಿಸಿದರು.