ಸ್ವಸಹಾಯ ಸಂಘದಿಂದ ಮಾದರಿ ಸಮಾಜ ನಿರ್ಮಾಣ

ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವನ್ನು ಮಂದಾರ್ತಿ ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಚ್.ವಿಠಲ ಶೆಟ್ಟಿ ಶೇಡಿಕೊಡ್ಲು ಉದ್ಘಾಟಿಸಿದರು. ನಮಸ್ತೇ ಭಾರತ್ ಟ್ರಸ್ಟ್‌ನ ಪ್ರಮೋದ್ ಶೆಟ್ಟಿ ಮಂದಾರ್ತಿ, ಸ್ವಪ್ನಾ ಪ್ರಕಾಶ್, ನಿರ್ಮಲಾ ಶೆಟ್ಟಿ ಇತರರು ಇದ್ದರು
ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವನ್ನು ಮಂದಾರ್ತಿ ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಚ್.ವಿಠಲ ಶೆಟ್ಟಿ ಶೇಡಿಕೊಡ್ಲು ಉದ್ಘಾಟಿಸಿದರು. ನಮಸ್ತೇ ಭಾರತ್ ಟ್ರಸ್ಟ್‌ನ ಪ್ರಮೋದ್ ಶೆಟ್ಟಿ ಮಂದಾರ್ತಿ, ಸ್ವಪ್ನಾ ಪ್ರಕಾಶ್, ನಿರ್ಮಲಾ ಶೆಟ್ಟಿ ಇತರರು ಇದ್ದರು
Published on
ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಗ್ರಾಮಾಭಿವೃದ್ಧಿ ಯೋಜನೆಯಿಂದ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಸ್ವಸಹಾಯ ಸಂಘದ ಮೂಲಕ ಅನೇಕ ಒಳ್ಳೆ ರೀತಿಯ ಕೆಲಸ, ಮಾದರಿಯುತ ಸಮಾಜ ನಿರ್ಮಾಣವಾಗುತ್ತಿದೆ. ಸಂಘ-ಸಂಸ್ಥೆಗಳಿಂದ ಜನರು ಅಭಿವೃದ್ಧಿ ಹೊಂದಿದ್ದಾರೆ. ಒಳ್ಳೆ ಗುಣವನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಮಂದಾರ್ತಿ ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಚ್.ವಿಠಲ ಶೆಟ್ಟಿ ಶೇಡಿಕೊಡ್ಲು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬ್ರಹ್ಮಾವರ ತಾಲೂಕು ಮಂದಾರ್ತಿ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಂದಾರ್ತಿ ವಲಯದ ಸಹಭಾಗಿತ್ವದಲ್ಲಿ ಶಿರೂರು ಮುದ್ದುಮನೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ, ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೂತನ ಸದಸ್ಯರಿಗೆ ಕೈಪಿಡಿಯನ್ನು ನಮಸ್ತೇ ಭಾರತ್ ಟ್ರಸ್ಟ್‌ನ ಪ್ರಮೋದ್ ಶೆಟ್ಟಿ ಮಂದಾರ್ತಿ ವಿತರಿಸಿದರು.
ಎಂ.ಐ.ಎಸ್. ಯೋಜನಾಧಿಕಾರಿ ಸ್ವಪ್ನಾ ಪ್ರಕಾಶ್, ಉದ್ಯಮಿ ಗುರುಪ್ರಸಾದ್ ಮಾತನಾಡಿದರು.
9 ಒಕ್ಕೂಟಗಳ ನಿರ್ಗಮನ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ದಾಖಲಾತಿ ಹಸ್ತಾಂತರ ಮಾಡುವ ಮೂಲಕ ಜವಾಬ್ದಾರಿ ಹಸ್ತಾಂತರಿಸಿದರು. ಇಬ್ಬರು ಸೇವಾ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಶೌರ್ಯ ತಂಡದ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಜನಜಾಗೃತಿ ವೇದಿಕೆ ವಲಯಾಧ್ಯಕ್ಷೆ ನಿರ್ಮಲಾ ಶೆಟ್ಟಿ ಮಾತನಾಡಿದರು. ಹೆಗ್ಗುಂಜೆ ಗ್ರಾಪಂ ಅಧ್ಯಕ್ಷ ರಾಮಕೃಷ್ಣ, ವಲಯ ಅಧ್ಯಕ್ಷ ಸುರೇಶ್ ಆಚಾರ್, ಉದ್ಯಮಿ ಪ್ರಿಯದರ್ಶನ್ ಶೆಟ್ಟಿ ಬನ್ನೇರಳಕಟ್ಟೆ, ಶೌರ್ಯ ವಿಪತ್ತು ಘಟಕ ಮಂದಾರ್ತಿ ಪ್ರತಿನಿಧಿ ಮಂಜುನಾಥ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಅನನ್ಯಾ ಪ್ರಾರ್ಥಿಸಿದರು. ಸೇವಾಪ್ರತಿನಿಧಿ ಭಾರತಿ ಸಿ. ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಸಚಿನ್ ಕುಮಾರ್ ವರದಿ ವಾಚಿಸಿದರು. ಶಿರೂರು ಸೇವಾಪ್ರತಿನಿಧಿ ಪಲ್ಲವಿ ಶೆಟ್ಟಿ ವಂದಿಸಿದರು. ಮಣಿಕಂಠ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net