ಆರೋಗ್ಯವಂತ ಸಮಾಜ ನಿರ್ಮಾಣ

 ಸ್ವಚ್ಛತಾ ಸಂವಾದ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ನೆರವಿನ ಚೆಕ್ ಹಸ್ತಾಂತರಿಸಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಬಾಳೆಪುಣಿ ಜನಜೀವನ ಗೌರವಾಧ್ಯಕ್ಷ ರಮೇಶ ಶೇಣವ, ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ, ನಡುಪದವು ಮಸೀದಿ ಅಧ್ಯಕ್ಷ ನಾಸೀರ್ ನಡುಪದವು ಮತ್ತಿತರರು ಉಪಸ್ಥಿತರಿದ್ದರು.

Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ರೋಗಮುಕ್ತ, ಆರೋಗ್ಯವಂತ ಸಮಾಜ ನಿರ್ಮಾಣ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಸ್ವಚ್ಛ ಪರಿಸರ ಅಗತ್ಯವಾಗಿದ್ದು, ಈ ದಿಸೆಯಲ್ಲಿ ಸರ್ಕಾರ, ಸಮಾಜ, ಸಂಘ-ಸಂಸ್ಥೆಗಳು ಒಂದಾಗಿ ಶ್ರಮಿಸುವ ಅಗತ್ಯವಿದೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಮುಡಿಪು ಜನಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಜೀವನ್‌ಮೂರ್ತಿ ಸರ್ವೋದಯ ಮಂಟಪದಲ್ಲಿ ಮಂಗಳವಾರ ಶೂನ್ಯಕಸ ನಿರ್ವಹಣೆ, ಸ್ವಚ್ಛ ಮನೆ ಸ್ವಯಂಘೋಷಣೆ ಸುಸ್ಥಿರ ಸ್ವಚ್ಛತೆ ಸುಸ್ಥಿರ ಅಭಿವೃದ್ಧಿ ಸಂವಾದ ಉದ್ಘಾಟಿಸಿ ಮಾತನಾಡಿದರು.
ಯುನೈಟೆಡ್ ಆಫ್‌ರೋಡ್ಸ್ ವತಿಯಿಂದ ಮಂಗಳೂರು, ಉಳ್ಳಾಲ, ಪುತ್ತೂರು, ಪುತ್ತೂರು ತಾಲೂಕಿನ ಅಸಹಾಯಕ 11 ಕುಟುಂಬಗಳಿಗೆ ಶೈಕ್ಷಣಿಕ, ಆರೋಗ್ಯ, ಸ್ವ-ಉದ್ಯೋಗ, ಸೋಲಾರ್ ಸೌಲಭ್ಯ ವಿತರಿಸಲಾಯಿತು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಮಾತನಾಡಿದರು. ಬಾಳೆಪುಣಿ ಜನಜೀವನ ಗೌರವಾಧ್ಯಕ್ಷ ರಮೇಶ ಶೇಣವ, ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ, ನಡುಪದವು ಮಸೀದಿ ಅಧ್ಯಕ್ಷ ನಾಸೀರ್ ನಡುಪದವು, ಉದ್ಯಮಿ ವಿಜೇಶ್ ನಾಯ್ಕ ನಡಿಗುತ್ತು, ಪ್ರಾಧ್ಯಾಪಕ ಡಾ.ಸಿ.ವಿ.ಪೂಜಾರ್, ಯುನೈಟೆಡ್ ಆಫ್ ರೋಡ್ಸ್ ಅಧ್ಯಕ್ಷ ಅವಿನಾಶ್ ಅಡಪ ನಡಿಗುತ್ತು, ಬಂಟ್ವಾಳ ತಾಪಂ ಮಾಜಿ ಸದಸ್ಯ ಹೈದರ್ ಕೈರಂಗಳ, ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ನಡುಪದವು, ಜಮೀಯತುಲ್ ಫಲಾಹ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸೀರ್ ಕೆಕೆ, ಸೀತಾರಾಮ್, ಪ್ರೊ.ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net