ಕಂಬಳದಿಂದ ಸಹೋದರತೆ, ಸಾಮರಸ್ಯ

 ಮೂಡೂರು-ಪಡೂರು ಜೋಡುಕರೆ ಕಂಬಳವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪ್ರದ್ಮಪ್ರಸಾದ್ ಅಜಿಲ ಉದ್ಘಾಟಿಸಿದರು. ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಮಾಜಿ ಸಚಿವ ರಮಾನಾಥ ರೈ, ಭರತ್ ಮುಂಡೋಡಿ, ಪ್ರೊಬೇಷನರಿ ಐಪಿಎಸ್ ಅನನ್ಯಾ ಶ್ರೀವಾಸ್ತವ್ ಇತರರು ಇದ್ದರು.
ಮೂಡೂರು-ಪಡೂರು ಜೋಡುಕರೆ ಕಂಬಳವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪ್ರದ್ಮಪ್ರಸಾದ್ ಅಜಿಲ ಉದ್ಘಾಟಿಸಿದರು. ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಮಾಜಿ ಸಚಿವ ರಮಾನಾಥ ರೈ, ಭರತ್ ಮುಂಡೋಡಿ, ಪ್ರೊಬೇಷನರಿ ಐಪಿಎಸ್ ಅನನ್ಯಾ ಶ್ರೀವಾಸ್ತವ್ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಜಾತಿ, ಧರ್ಮಗಳ ನಡುವೆ ನಡೆಯುತ್ತಿರುವ ಸಂಘರ್ಷದ ಈ ಕಾಲಘಟ್ಟದಲ್ಲಿ ಏಕಾತ್ಮಕ ಚಿಂತನೆಯ ಕಂಬಳಕ್ರೀಡೆ ಸಹೋದರತೆ, ಸಾಮರಸ್ಯದ ಭಾವನೆ ಮೂಡಿಸಿದೆ. ಈ ನಿಟ್ಟಿನಲ್ಲಿ ಕಂಬಳ ಸಮಿತಿಯ ಪ್ರಯತ್ನ ಶ್ಲಾಘನೀಯ ಎಂದು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧೀಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮೂಡೂರು-ಪಡೂರು ಜೋಡುಕರೆ ಕಂಬಳ ವೇದಿಕೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪ್ರದ್ಮಪ್ರಸಾದ್ ಅಜಿಲ ಕಂಬಳಕ್ಕೆ ಚಾಲನೆ ನೀಡಿದರು. ಅರ್ಚಕ ಹರಿಪ್ರಸಾದ್ ಬೊಲ್ಲುಳ್ಳಾಯ ಧಾರ್ಮಿಕ ವಿಧಿ, ವಿಧಾನ ನೆರವೇರಿಸಿದರು. ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಸಭಾಧ್ಯಕ್ಷತೆ ವಹಿಸಿದ್ದರು.
ಅಲ್ಲಿಪಾದೆ ಸಂತ ಅಂತೋನಿ ಧರ್ಮಕೇಂದ್ರದ ಧರ್ಮಗುರು ರಾಬರ್ಟ್ ಡಿಸೋಜ, ಬೆಂಗಳೂರು ಪಲ್ಲೊಟಾಯನ್ ಪ್ರಾಂತ್ಯದ ಸಲಹೆಗಾರರಾದ ಗಿಲ್ಬರ್ಟ್ ಮಸ್ಕರೇನ್ಹಸ್, ಫರ್ಲಾ ವೆಲಂಕಣಿ ಮಾತೆ ಧರ್ಮಕೇಂದ್ರದ ಧರ್ಮಗುರು ಮಾರ್ಟ್ ಅರುಣ್ ಡಿಸೋಜ, ಕಂಬಳ ಅಸೋಸೊಯೇಶನ್ ಸಲಹೆಗಾರ ಪ್ರೊ.ಗುಣಪಾಲ ಕಡಂಬ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಉಪಾಧ್ಯಕ್ಷ ನಾರಾಯಣ ನಾಯ್ಕ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾಾರಿ, ಬಂಟ್ವಾಳ ಡಿವೈಎಸ್ಪಿ ಯಶು ಕುಮಾರ್, ಪ್ರೊಬೇಷನರಿ ಐಪಿಎಸ್ ಅನನ್ಯಾ ಶ್ರೀವಾಸ್ತವ್, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಮೆಲ್ವಿನ್ ಲಸ್ರಾದೋ, ಹೋಟೆಲ್ ಉದ್ಯಮಿ ನಂಜಪ್ಪ ಶೆಟ್ಟಿ ಮೈಸೂರು, ಗಣ್ಯರಾದ ಡಾ.ರಾಜಾರಾಮ್ ಪುತ್ತೂರು, ಮಹಾಬಲ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಧರಣೇಂದ್ರ ಕುಮಾರ್, ಕಿರಣ್ ಶೆಟ್ಟಿ, ಶೈಲಜಾ ರಾಜೇಶ್, ಕಂಬಳ ಸಮಿತಿ ಪದಾಧಿಕಾರಿಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಪದ್ಮಶೇಖರ್ ಜೈನ್, ಪದ್ಮನಾಭ ರೈ ಕಲ್ಲಡ್ಕ, ಬೇಬಿ ಕುಂದರ್, ಬಿ.ಎಂ.ಅಬ್ಬಾಸ್ ಅಲಿ, ಬಾಲಕೃಷ್ಣ ಅಂಚನ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಶೇಖರ ಭಂಡಾರಿ, ಸುದರ್ಶನ್ ಜೈನ್, ರಾಜೀವ ಶೆಟ್ಟಿ ಎಡ್ತೂರು, ಪಿಲಿಪ್ ಫ್ರಾಂಕ್, ಮಹಾಬಲ ಆಳ್ವ, ಜಗದೀಶ್ ಕೊಯಿಲ, ಪಶುಸಂಗೋಪನಾ ಇಲಾಖೆಯ ಬಾಲಕೃಷ್ಣ, ಡಾ.ಸುರೇಶ್, ಮಲ್ಲಿಕಾ ಶೆಟ್ಟಿ ಅಮ್ಟಾಡಿ, ಮಹಮ್ಮದ್ ನಂದಾವರ, ಸುಧಾಕರ ಶೆಣೈ ಖಂಡಿಗ, ವೆಂಕಪ್ಪ ಪೂಜಾರಿ ಬಂಟ್ವಾಳ, ಸ್ಥಳದಾನಿಗಳು ಮೊದಲಾದವರು ಉಪಸ್ಥಿತರಿದ್ದರು.
ಪಿಯೂಸ್ ಎಲ್.ರೊಡ್ರಿಗಸ್ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ಸರಳ, ಸಜ್ಜನಿಕೆ ವ್ಯಕ್ತಿತ್ವದ ರಮಾನಾಥ ರೈ ಅವರ ನೇತೃತ್ವದಲ್ಲಿ ಸರ್ವಧರ್ಮೀಯರ ಪಾಲ್ಗೊಳ್ಳುವಿಕೆಯ ಮೂಡೂರು- ಪಡೂರು ಕಂಬಳದ ಮೂಲಕ ಜಿಲ್ಲೆಯ ಸಂಸ್ಕೃತಿ ಉಳಿಸುವ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ. ಈ ಕಾರ್ಯ ನಿರಂತರವಾಗಿ ಮುನ್ನಡೆಯಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net