ಶುಕ್ರವಾರ ಬೆಳಿಗ್ಗೆ ಸುಮಾರು 8:30ರ ಸುಮಾರಿಗೆ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ಬಳಿ ಇರುವ ಅಂಗಡಿಯ ಎದುರು ಕಾರೊಂದು ಬಂದು ನಿಂತಿತು. ನಾನು ಅಂಗಡಿಯ ಸಿಮೆಂಟ್ ಹಾಸಿನ ಮೇಲೆ ಮೊಬೈಲ್ ನೋಡುತ್ತ ಕುಳಿತ್ತಿದ್ದೆ. ನಿಂತಿದ್ದ ಕಾರಿನತ್ತ ದೃಷ್ಟಿ ಹರಿಸಿದಾಗ, ಅದಾಗಲೇ ಮೊಬೈಲ್‌ನಲ್ಲಿ ಕಂಡಿದ್ದ ಲಾವಣ್ಯಾಳನ್ನು ಕೊಚ್ಚಿ ಕೊಲೆಗೈದಿದ್ದ ಚೇತನ್‌ನಂತೆ ಕಾರಿನ ಚಾಲಕ ಕಂಡು ಬಂದ. ತಕ್ಷಣ ಜಾಗೃತನಾಗಿ ಕಾರಿನ ಬಳಿ ಹೋಗಿ, ವಿಚಾರಿಸಲು ಪ್ರಯತ್ನಿಸಿದಾಗ ಅರ್ಧಕ್ಕೆ ಕಾರಿನ ಗ್ಲಾಸ್ ತೆರೆದ. ‘‘ನಿನಗೆ ಏನಾಗಬೇಕು ಎಂದು ಪ್ರಶ್ನಿಸಿದಾಗ, ‘‘ಬಿ. ಸಿ. ರೋಡ್‌ನಲ್ಲಿ ಯುವತಿಯ ಕೊಲೆಗೈದ ಕೊಲೆಗಾರ ನೀನೇ ಅಲ್ಲವೇ’’ ನೇರವಾಗಿ ಪ್ರಶ್ನಿಸಿದೆ. ಆಗ ಆತ ಸಂಪೂರ್ಣ ಒತ್ತಡಕ್ಕೆ ಸಿಲುಕಿದವನಂತೆ ಕಂಡು ಬಂದ ಎಂದು ಚೇತನ್‌ನ್ನು ಪಚ್ಚನಾಡಿಯಲ್ಲಿ ಪೊಲೀಸರು ಬಂಧಿಸುವಲ್ಲಿ ಸಹಕರಿಸಿದ ಡಂಪಿಂಗ್ ಯಾರ್ಡ್‌ಗೆ ಗುರುಪುರ-ಕೈಕಂಬ ಮತ್ತಿತರ ಪ್ರದೇಶಗಳ ಕೋಳಿ ಮಾರಾಟದಂಗಡಿಗಳ ಕೋಳಿ ತ್ಯಾಜ್ಯ ಸಾಗಾಟ ಮಾಡುವ ಪಿಕಪ್‌ನಲ್ಲಿ ಕೆಲಸ ಮಾಡುತ್ತಿರುವ ಗಿರೀಶ್ ಪಚ್ಚನಾಡಿ ವಿವರಿಸಿದ್ದಾರೆ.