ಬ್ರಹ್ಮಾವರಕ್ಕೆ ಬೇಕಿದೆ ಉಪ ಪೊಲೀಸ್ ಠಾಣೆ

 ಬ್ರಹ್ಮಾವರ ಪೊಲೀಸ್ ಠಾಣೆ
ಬ್ರಹ್ಮಾವರ ಪೊಲೀಸ್ ಠಾಣೆ
Published on
ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಉಡುಪಿಗೆ ಸಮನಾಗಿ ವೇಗವಾಗಿ ಬೆಳೆಯುತ್ತಿರುವ ತಾಲೂಕು ಕೇಂದ್ರ ಬ್ರಹ್ಮಾವರಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಆರಕ್ಷಕ ಠಾಣೆಗೆ ಹೆಚ್ಚುವರಿ ಸಿಬ್ಬಂದಿ ಮತ್ತು ಹೊರ ಠಾಣೆಯ ಅಗತ್ಯ ಇದೆ.
27 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ, ಅಂದಾಜು 12,500 ಮನೆಗಳು 60,000 ಜನಸಂಖ್ಯೆ ಇರುವ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೇವಲ 40 ಸಿಬ್ಬಂದಿ ಇದ್ದಾರೆ. ಇದರಲ್ಲಿ 4 ಮಹಿಳಾ ಸಿಬ್ಬಂದಿ ಇದ್ದಾರೆ. ಠಾಣಾ ವ್ಯಾಪ್ತಿಯ 30 ಕಿ.ಮಿ. ದೂರದ ಶಿರೂರು, ಮುದ್ದುಮನೆ ಕರ್ಜೆಯ ಕೆಲವು ಭಾಗದಲ್ಲಿ ಅಪರಾಧ, ಅಪಘಾತ ಸೇರಿದಂತೆ ಅವಘಡ, ಘಟನೆಗಳು ನಡೆದರೆ ಇರುವ ಸಿಬ್ಬಂದಿ ಹಗಲಿರುಳು ಎನ್ನದೆ ಕೆಲಸದ ಪರಿಧಿ ಒಳಗೆ ಕಾರ್ಯ ನಿರ್ವಹಿಸಬೇಕಿದೆ.
ಕಂದಾಯ ಇಲಾಖೆಯಲ್ಲಿ ಬ್ರಹ್ಮಾವರ ತಾಲೂಕಿನಲ್ಲಿ 2 ಹೋಬಳಿ ಇದ್ದು, ಸದ್ಯ ಮಂದಾರ್ತಿ ಹೋಬಳಿ ರಚನೆಗೆ ಸಿದ್ಧತೆ ನಡೆಯುತ್ತಿದೆ. ತಾಲೂಕಿನ ಮಧ್ಯ ಭಾಗ ಎನಿಸಿದ ಸಾಯಿಬರಕಟ್ಟೆ ಭಾಗದಲ್ಲಿ ಪೊಲೀಸ್ ಹೊರಠಾಣೆ ವಾಡಿದಲ್ಲಿ ತಾಲೂಕಿನ ಉತ್ತರ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ.
ಈ ಹಿಂದೆ ಉಡುಪಿ ಎಸ್‌ಪಿ ಆಗಿದ್ದ ಅರುಣ್ ಕುವಾರ್ ತಾಲೂಕಿನ ಮಧ್ಯಭಾಗದಲ್ಲಿ ಯಾವುದಾದರೂ ಸರ್ಕಾರಿ ಜಾಗ ಇದ್ದರೆ ಸರ್ಕಾರಕ್ಕೆ ಮನವಿ ವಾಡುವುದಾಗಿ ಬ್ರಹ್ಮಾವರ ಕಂದಾಯ ಇಲಾಖೆಗೆ ತಿಳಿಸಿದ್ದರು.

ಬೆಳೆಯುತ್ತಿರುವ ಪಟ್ಟಣ

ತುರ್ತು ಸಂದರ್ಭ ಅಥವಾ ಆರೋಪಿಗಳನ್ನು ಹಿಡಿಯಲು ಪೊಲೀಸರು 30 ಕಿ.ಮಿ. ದೂರದ ಗ್ರಾಮೀಣ ಭಾಗಕ್ಕೆ ತೆರಳುವಾಗ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಠಾಣೆಗೆ ಕಾಲು ಭಾಗ ವಾತ್ರ ನಗರ ಪ್ರದೇಶವಾಗಿದ್ದು, ಮುಕ್ಕಾಲು ಭಾಗ ಗ್ರಾಮೀಣ ಭಾಗ ಇರುವ ಕಾರಣ ಬೆಳೆಯುತ್ತಿರುವ ಬ್ರಹ್ಮಾವರಕ್ಕೆ ಉಪ ಠಾಣೆಯ ಅಗತ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಂದಿಸಬೇಕಾಗಿದೆ.

ಸುರಕ್ಷತೆ ದೃಷ್ಟಿಯಿಂದ ಕೆಲವೊಂದು ಗ್ರಾಮಗಳಿಗೆ ಉಪಠಾಣೆಯ ಅಗತ್ಯ ಇದೆ. ಬ್ರಹ್ಮಾವರ ತಾಲೂಕಿನಲ್ಲಿ ಉಪ ಪೊಲೀಸ್ ಠಾಣೆಗೆ ಜಾಗದ ಕುರಿತು ಪೊಲೀಸ್ ಇಲಾಖೆಯಿಂದ ಮನವಿ ಬಂದಲ್ಲಿ ಸೂಕ್ತ ಸರ್ಕಾರಿ ಜಾಗವನ್ನು ಕಂಡು ಇಲಾಖೆಗೆ ನೀಡಲು ಸಾಧ್ಯವಿದೆ.

— ಶ್ರೀಕಾಂತ್ ಎಸ್.ಹೆಗ್ಡೆ, ಬ್ರಹ್ಮಾವರ ತಹಸೀಲ್ದಾರ್

20 ವರ್ಷದ ಹಿಂದಿನ ಜನಸಂಖ್ಯೆ ಅಪರಾಧದ ಹಿನ್ನೆಲೆಯಲ್ಲಿ ಇನ್ನೂ ಇದೆ. ಬ್ರಹ್ಮಾವರ ಠಾಣೆಯಲ್ಲಿ ವರ್ಷಕ್ಕೆ ಸರಾಸರಿ 300 ಎಫ್‌ಐಆರ್ ಆಗುತ್ತದೆ. ಜಿಲ್ಲೆಯಲ್ಲಿ ಕಾನ್‌ಸ್ಟೆಬಲ್ ಮಟ್ಟದಲ್ಲಿ ಶೇ.15ರಷ್ಟು ಸಿಬ್ಬಂದಿ ಕೊರತೆ ಇದ್ದು, ಸರ್ಕಾರ ಅದನ್ನು ಭರ್ತಿ ವಾಡಿದಲ್ಲಿ ಉಪಠಾಣೆ ಕುರಿತು ನಿರ್ಧಾರ ವಾಡಬಹುದು.

— ಹರಿರಾಮ್ ಶಂಕರ್, ಉಡುಪಿ ಎಸ್.ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net