ಬ್ರಹ್ಮಾವರದಲ್ಲಿ ಭಾನುವಾರ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು. ಮಧುಸೂದನ್ ಕಚ್ಚೂರು, ವಿನಯ್ ಕುವಾರ್ ಬಾರ್ಕೂರು, ಆರ್.ರತ್ನಾಕರ್ ಶೆಟ್ಟಿ, ಶ್ರೀಕಾಂತ್ ಆಚಾರ್ಯ, ಬಿ ಗಣೇಶ್ ಶೆಟ್ಟಿ, ದೇವರಾಜ್ ಪೂಜಾರಿ, ಅರುಣ್ ಪೂಜಾರಿ, ರಾವೇಂದ್ರ ಮತ್ತಿತರರು ಇದ್ದರು.
ಬ್ರಹ್ಮಾವರ: ಹಿಂದೂ ಅಂದರೆ ಅದು ಆರ್‌ಎಸ್‌ಎಸ್‌ನವರು ನೀಡಿದ ಹೆಸರಲ್ಲ ಅದು ವೇದ ಕಾಲದಲ್ಲಿ ಇದ್ದ ಹೆಸರು. ಅದೊಂದು ಜೀವನ ಕ್ರಮ ಅದನ್ನು ಪಾಲಿಸುವವರು ಎಲ್ಲಿಯೇ ಇದ್ದರೂ ಅವರು ಹಿಂದೂಗಳೇ ಎಂದು ಗಣೇಶ್ ಕಡೆಶಿವಾಲಯ ಕಡಬ ಹೇಳಿದರು.
ಬ್ರಹ್ಮಾವರ ತಾಲೂಕು ಬಾರ್ಕೂರು ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಭಾನುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾರ್ಕೂರು ಶ್ರೀ ಬಟ್ಟೆ ವಿನಾಯಕ ದೇವಸ್ಥಾನದಿಂದ ಹೊರಟ ಹಿಂದೂ ಸಂಗಮ ಶೋಭಾಯಾತ್ರೆ ರಥಬೀದಿ ಮೂಲಕ ಸಾಗಿಬಂದು ಶ್ರೀ ದುರ್ಗಾ ಟ್ರೇಡರ್ಸ್ ಮುಂಭಾಗದ ಮೈದಾನದ ಭೂತಾಳ ಪಾಂಡ್ಯ ವೇದಿಕೆ ತನಕ ಸಾಗಿ ಬಂತು.
ಕಾರ್ಯಕ್ರಮಕ್ಕೂ ಮೊದಲು ಭಾರತ ವಾತೆ ಹಾಗೂ ಗೋವಾತೆಗೆ ಪೂಜೆ ಸಲ್ಲಿಸಲಾಯಿತು. ಶ್ರೀನಿವಾಸ ಶೆಟ್ಟಿಗಾರ್ ರಂಗನಕೆರೆ ಬಾರ್ಕೂರು, ಸತೀಶ್ ಎಸ್.ಅಮಿನ್, ಗೋಕುಲ್ ದಾಸ್ ಬಾರ್ಕೂರು ಉಪಸ್ಥಿತರಿದ್ದರು. ಸತೀಶ್ ಪೂಜಾರಿ ಬೆಣ್ಣೆಕುದ್ರು ಸ್ವಾಗತಿಸಿ, ಪ್ರಾಸ್ತಾವಿಸಿದರು. ನಿವೃತ್ತ ಶಿಕ್ಷಕ ರತ್ನಾಕರ ಶೆಟ್ಟಿ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ತೇಜಸ್ ಬಂಗೇರಾ ನಿರೂಪಿಸಿದರು.