ಬ್ರಹ್ಮಕಲಶಾಭಿಷೇಕ ಆಮಂತ್ರಣ ಬಿಡುಗಡೆ

ಅಷ್ಟಬಂಧ ಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಅರ್ಚಕ ಪಿ.ಸುಬ್ರಹ್ಮಣ್ಯ ಭಟ್, ಗುತ್ತಿನಾರ್ ಸುಧಾಕರ ಶೆಟ್ಟಿ ದೆಪ್ಪುಣಿಗುತ್ತು ಮೊದಲಾದವರಿದ್ದರು.
ಅಷ್ಟಬಂಧ ಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಅರ್ಚಕ ಪಿ.ಸುಬ್ರಹ್ಮಣ್ಯ ಭಟ್, ಗುತ್ತಿನಾರ್ ಸುಧಾಕರ ಶೆಟ್ಟಿ ದೆಪ್ಪುಣಿಗುತ್ತು ಮೊದಲಾದವರಿದ್ದರು.
Published on
ಮೂಲ್ಕಿ: ಕವತ್ತಾರು-ಕರ್ನಿರೆ ಗ್ರಾಮದ ಆರಾಧ್ಯಕ್ಷೇತ್ರ ಪುತ್ತೂರು ದೇಂದಡ್ಕ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಾರ್ಚ್ 20ರಿಂದ 25ರವರೆಗೆ ನಡೆಯಲಿರುವ ಅಷ್ಟಬಂಧ ಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ದೇವಳದಲ್ಲಿ ನಡೆಯಿತು. ಆನುವಂಶಿಕ ಅರ್ಚಕ ಪಿ.ಸುಬ್ರಹ್ಮಣ್ಯ ಭಟ್ ಅವರಿಂದ ವಿಶೇಷ ಪ್ರಾರ್ಥನೆ ನಡೆದು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ಗುತ್ತಿನಾರ್ ಸುಧಾಕರ ಶೆಟ್ಟಿ ದೆಪ್ಪುಣಿಗುತ್ತು, ಅಧ್ಯಕ್ಷ ಪ್ರಮೋದ್ ಪುಟ್ಟಣ್ಣ ಶೆಟ್ಟಿ ದೇಂದಡ್ಕ, ಪ್ರಧಾನ ಕಾರ್ಯದರ್ಶಿ ಜನಾನಂದ ಶೆಟ್ಟಿ ತಿಂಗೊಳೆ, ಕಾರ್ಯದರ್ಶಿ ಗಂಗಾಧರ ವಿ.ಶೆಟ್ಟಿ ಬರ್ಕೆ ತೋಟ, ಪ್ರಧಾನ ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿಗಳಾದ ಅನಿಲ್ ಕುಮಾರ್ ಪುತ್ತೂರು ಹಾಗೂ ಕಿಶೋರ್ ದೇವಾಡಿಗ ದೇಂದಡ್ಕ ಪುತ್ತೂರು,ಪ್ರಮುಖರಾದ ರಾಮದಾಸ್ ಶೆಟ್ಟಿ ಪುತ್ತೂರು ಬಾಳಿಕೆಮನೆ, ಪಾಂಡುರಂಗ ಕಾಮತ್ ದೇಂದಡ್ಕ ಪುತ್ತೂರು, ಪ್ರಭಾಕರ ಶೆಟ್ಟಿ ಸಾಗುಮನೆ, ಗುರುರಾಜ್ ಭಟ್, ನಾಗರಾಜ್ ಭಟ್, ಅಶೋಕ್ ಭಂಡಾರಿ, ದಿನೇಶ್ ಪೂಜಾರಿ, ಕರುಣಾಕರ ಪೂಜಾರಿ ಮಾದಿಗುರಿ, ಗಿರಿಧರ ಕಾಮತ್, ಲಕ್ಷ್ಮಣ ಅಂಚನ್, ಪ್ರಭಾಕರ ಪೂಜಾರಿ, ಗಿರೀಶ್ ಮಡಿವಾಳ, ಪ್ರೀತಮ್ ರೈ, ವಿಜಯ ಶೆಟ್ಟಿ ಅವರೊಂದಿಗೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net