ಏ.3ರಿಂದ 7ರವರೆಗೆ ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ ಬ್ರಹ್ಮಕಲಶೋತ್ಸವ

ಕೃಷ್ಣಮಠದಿಂದ ಹೊರಟ ಹೊರೆಕಾಣಿಕೆ ಶೋಭಾಯಾತ್ರೆಗೆ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಕೃಷ್ಣಮಠದಿಂದ ಹೊರಟ ಹೊರೆಕಾಣಿಕೆ ಶೋಭಾಯಾತ್ರೆಗೆ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಚಾಲನೆ ನೀಡಿದರು.
Published on
ಉಡುಪಿ: ತಪಸ್ವಿ ಯತಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಇಂದ್ರಾಣಿ ತೀರ್ಥದ ಉಗಮ ಸ್ಥಾನದಲ್ಲಿರುವ ಆಂಜನೇಯ ಗುಡಿ ಮತ್ತು ನಾಗಬನ ಜೀಣೋರ್ದ್ಧಾರ ನಡೆಸಲಾಗಿದ್ದು, ಸುಮಾರು 3 ಕೋಟಿ ವೆಚ್ಚ ಸುಂದರ ಶಿಲಾಮಯ ಗುಡಿ ನಿರ್ಮಿಸಲಾಗಿದೆ. ಏಪ್ರಿಲ್​ 3 ರಿಂದ 7ರವರೆಗೆ ಪುನ:ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
3 ರಂದು ಸಂಜೆ 6 ರಿಂದ ವಾಸ್ತು ಪೂಜೆ, ವಾಸ್ತು ಬಲಿ, ಬಿಂಬಾಧಿವಾಸ ಪೂಜಾದಿಗಳು ನೆರವೇರಲಿದೆ. 4 ರಂದು ಬೆಳಿಗ್ಗೆ 6.-48 ರಿಂದ ಅಷ್ಟಬಂಧ ಸಹಿತ ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನೆರವೇರಲಿದೆ. ಸಾಯಂಕಾಲ 5.30ಕ್ಕೆ ಸಭಾಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಲಿದ್ದಾರೆ. 5 ರಂದು ಶ್ರೀ ಮುಖ್ಯಪ್ರಾಣ ದೇವರಿಗೆ ಬ್ರಹ್ಮಕುಂಬಾಭಿಷೇಕ, ಪ್ರಸನ್ನ ಪೂಜಾದಿಗಳು, ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ಜರುಗಲಿದೆ. ಸಂಜೆ 5.30ಕ್ಕೆ ಸಭಾಕಾರ್ಯಕ್ರಮದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಲಿದ್ದಾರೆ. 7 ಗಂಟೆಗೆ ಮಹಾರಂಗ ಪೂಜೆ ಜರುಗಲಿದೆ. 6 ರಂದು ಸಾಯಂಕಾಲ 5.30ಕ್ಕೆ ಮೊಕ್ತೇಸರರ ಸಂಗಮ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಶ್ರೀ ವಿದ್ಯಾಧಿಶ ತೀರ್ಥ ಸ್ವಾಮೀಜಿ ಆಶೀವರ್ಚನ ನೀಡಲಿದ್ದಾರೆ. ಸಂಜೆ 6 ರಿಂದ ನಾಗಗುಡಿಯಲ್ಲಿ ವಾಸ್ತು, ರಕ್ಷಾ ಹೋಮ, ಬಿಂಬಾಧಿವಾಸ ಪೂಜಾದಿಗಳು ನೆರವೇರಲಿದೆ. 7 ರಂದು ನಾಗದೇವರ ಪುನ@ ಪ್ರತಿಷ್ಠಾದಿಗಳು ಆಶ್ಲೇಷ ಬಲಿ, ಮಹಾ ಪೂಜೆ, ವಟು ಆರಾಧನೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ ನೆರವೇರಲಿದೆ. ಸಾಯಂಕಾಲ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀವರ್ಚನ ನೀಡಲಿದ್ದಾರೆ. ಧರ್ಮಸ್ಥಳದ ಧಮಾರ್ಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಏಪ್ರಿಲ್​ 4 ರಂದು ರಾತ್ರಿ 7.30ರಿಂದ ಕಲಾಮಯಂ ತಂಡದ ಜನಪದ ಹಾಗೂ ರಂಗ ಸಂಗೀತ ಮತ್ತು ಜಾನಪದ ವಾದ್ಯ ಪರಿಕರಗಳ ಸಮ್ಮಿಲನ ಗೊಂಡ ಜನಪದ ಕಲರವ, ಏಪ್ರಿಲ್​ 5 ರಂದು ರಾತ್ರಿ 7.30 ರಿಂದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಛಾಯಾನಂದನ, ಏಪ್ರಿಲ್​ 6 ರಂದು ಸಂಜೆ 7.30 ರಿಂದ ಗುರುವಸಂತಿ ಸಾಂಸತಿಕ ವೇದಿಕೆ ವತಿಯಿಂದ ಪೌರಾಣಿಕ ನಾಟಕ ಬಿಕ್ರಮ ಬಜರಂಗಿ, ಏಪ್ರಿಲ್​ 7ರಂದು ಸಂಜೆ 7.30 ರಿಂದ ಶ್ರೀ ಯಕ್ಷನಿಧಿ ಮೂಡುಬಿದರೆ, ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಯುವಮೇಳ ಇವರಿಂದ ಯಕ್ಷಗಾನ - ವೀರಮಣಿ ಕಾಳಗ ಜರುಗಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಮುಖ್ಯಪ್ರಾಣ ದೇವರ ಗುಡಿ ಜೀಣೋರ್ದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಇಂದ್ರಾಳಿ, ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಕುಶಲ್​ ಶೆಟ್ಟಿ, ಜೀಣೋರ್ದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ್​ ಇಂದ್ರಾಳಿ, ಕೋಶಾಧಿಕಾರಿ ರತ್ನಾಕರ್​ ಶೆಟ್ಟಿ ಬುಡ್ನಾರು, ಉಪಾಧ್ಯಕ್ಷ ಸಾಧು ಶೆಟ್ಟಿ, ಸೀತಾರಾಮ ನಾಯಕ್​, ಅರ್ಚಕ ಗೋಪಾಲ್​ ಭಟ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net