ರಾಮಭಕ್ತ ಹನುಮನಿಗೆ ಬ್ರಹ್ಮಕುಂಭಾಭಿಷೇಕ

ವೇದಮೂರ್ತಿ ಪುತ್ತೂರು ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಬ್ರಹ್ಮ ಕಲಶೋತ್ಸವದ ಮಹಾಪೂಜೆ ನಡೆಯಿತು. ಇಂದ್ರಾಳಿ ಜಯಕರ್​ ಶೆಟ್ಟಿ, ಭೂಪತಿ ಶೆಟ್ಟಿ ಇತರರಿದ್ದರು.
ವೇದಮೂರ್ತಿ ಪುತ್ತೂರು ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಬ್ರಹ್ಮ ಕಲಶೋತ್ಸವದ ಮಹಾಪೂಜೆ ನಡೆಯಿತು. ಇಂದ್ರಾಳಿ ಜಯಕರ್​ ಶೆಟ್ಟಿ, ಭೂಪತಿ ಶೆಟ್ಟಿ ಇತರರಿದ್ದರು.
Published on

* ಉಡುಪಿಯ ಇಂದ್ರಾಣಿ ಶ್ರೀಮುಖ್ಯಪ್ರಾಣನಿಗೆ ಕಲಶೋತ್ಸವ

* ಆಂಜನೇಯನಿಗೆ ಬ್ರಹ್ಮ ಕಲಶೋತ್ಸವದ ಮಹಾಪೂಜೆ  

ಉಡುಪಿ: ಅಷ್ಟಬಂಧದೊಂದಿಗೆ ಶನಿವಾರ ಪುನ; ಪ್ರತಿಷ್ಠಾಪಿತ ಇಂದ್ರಾಣಿಯ ಶ್ರೀಮುಖ್ಯಪ್ರಾಣ ದೇವರಿಗೆ ಭಾನುವಾರ (ಏ.5) ಬೆಳಗ್ಗೆ 9:15ಕ್ಕೆ ದೇವಳದ ತಂತ್ರಿ ವೇದಮೂರ್ತಿ ಪುತ್ತೂರು ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಬ್ರಹ್ಮ ಕುಂಭಾಭಿಷೇಕ ಹಾಗೂ ಬ್ರಹ್ಮ ಕಲಶೋತ್ಸವದ ಮಹಾಪೂಜೆ ನಡೆಯಿತು.
ಪ್ರಧಾನ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಉಪಸ್ಥಿತಿಯಲ್ಲಿ ಬೆಳಗ್ಗೆ ಗಣಹೋಮ, ಪ್ರಧಾನ ಕಲಾ ಸಾನ್ನಿಧ್ಯ ಹೋಮ, 1001 ಕಲಶಾರಾಧನೆ, ಪ್ರಸನ್ನ ಪೂಜೆ, ಮಹಾಪೂಜೆ, ಪಲ್ಲ ಪೂಜೆ ನಡೆಯಿತು. ಮಧ್ಯಾಹ್ನ 12:30ರ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. 7 ಸಾವಿರಕ್ಕೂ ಅಧಿಕ ಭಕ್ತರು ದೇವರ ಪ್ರಸಾದ ಭೋಜನ ಸ್ವೀಕರಿಸಿದರು. ಸಂಜೆ 7ರಿಂದ ಮಹಾರಂಗ ಪೂಜೆ, ಮಹಾಮಂತ್ರಾಕ್ಷತೆ ನೆರವೇರಿತು.
ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರು ಹಾಗೂ ನಾಗ ದೇವರ ಗುಡಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಭೂಪತಿ ಶೆಟ್ಟಿ, ಉಪಾಧ್ಯಕ್ಷ ಸಾಧು ಶೆಟ್ಟಿ ಇಂದ್ರಾಳಿ, ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್​ ಮಂಚಿಕೋಡಿ, ಇಂದ್ರಾಣಿ ಮುಖ್ಯಪ್ರಾಣ, ನಾಗದೇವರ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಯಕರ್​ ಶೆಟ್ಟಿ ಇಂದ್ರಾಳಿ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಾಕರ್​ ಇಂದ್ರಾಳಿ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಾಹನ ಉಚಿತ ವ್ಯವಸ್ಥೆ

ಶ್ರೀಮುಖ್ಯಪ್ರಾಣನ ಪುನ; ಪ್ರತಿಷ್ಠೆ ನಿಮಿತ್ತ ಆಯೋಜಿಸಿದ್ದ ಮೂರು ದಿನಗಳ ಧಾರ್ಮಿಕ ಕಾರ್ಯದಲ್ಲಿ ಭಕ್ತರಿಗೆ ಪಾಲ್ಗೊಳ್ಳಲು ಅನುಕೂಲ ಆಗುವಂತೆ ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿ ಕ್ರಾಸ್​ನಿಂದ ಇಂದ್ರಾಣಿ ದೇಗುಲದವರೆಗೆ (ಒಂದೂವರೆ ಕಿಮೀ) ತೆರಳಲು ಉಚಿತವಾಗಿ ವಾಹನ ವ್ಯವಸ್ಥೆ ಮಾಡಲಾಗಿತ್ತು. 

ಸಾಂಸ್ಕೃತಿಕ ಕಾರ್ಯಕ್ರಮ

ಮಧ್ಯಾಹ್ನ 12ಕ್ಕೆ ಶಂಕರ್​ ಮತ್ತು ತಂಡದಿಂದ ಭಕ್ತಿ ಸಂಗೀತ, ಮಧ್ಯಾಹ್ನ 2ಕ್ಕೆ ಪುತ್ತೂರು ಬೊಳುವಾರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ 'ಸಮರ ಸೌಗಂಧಿಕಾ' ತಾಳಮದ್ದಳೆ, ಸಂಜೆ 4:30ಕ್ಕೆ ಶ್ರೀಯಾ ಉಪಾಧ್ಯ, ಮೈತ್ರಿ ಪುರಾಣಿಕ್​, ಮಾಧುರಿ ಪುರಾಣಿಕ್​, ತೃಷಾ ಭಟ್​, ಭೂಮಿಕಾ ರಾವ್​, ಸಂಜನಾ ಹೆಬ್ಬಾರ್​ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯತು. ರಾತ್ರಿ 7:30ರಿಂದ ಪಾವಂಜೆ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಮಂಡಳಿಯಿಂದ ಯಕ್ಷಧ್ರುವ ಪಟ್ಲ ಸತೀಶ್​ ಶೆಟ್ಟಿ ಸಾರಥ್ಯದಲ್ಲಿ ಕದ್ರಿ ನವನೀತ ಶೆಟ್ಟಿ ರಚಿತ 'ಛಾಯಾ ನಂದನ' ಯಕ್ಷಗಾನ ಪ್ರದರ್ಶನಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net