ಹೃದ್ರೋಗ ಪೀಡಿತ ಬಾಲಕ ಸಾವು

Death
Death
Published on
ಕಾರ್ಕಳ: ಈದು ಗ್ರಾಮದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಬೆಳ್ತಂಗಡಿ ತಾಲೂಕಿನ ನಿವಾಸಿ ಶ್ರೀಧರ ಎಂಬುವರ ಪುತ್ರ ಪ್ರೀತೇಶ್(4) ಮೃತ ದುರ್ದೈವಿ.
ಹುಟ್ಟಿದ 6 ತಿಂಗಳಲ್ಲೇ ಆತನಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದು ಪತ್ತೆಯಾಗಿತ್ತು. ಬೆಂಗಳೂರಿನ ನಾರಾಯಣ ಹದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದು, ಮೂರು ವರ್ಷಗಳ ಹಿಂದೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಶಸಚಿಕಿತ್ಸೆ ನಡೆಸಲಾಗಿತ್ತು.
ಜುಲೈ 14ರಂದು ನಸುಕಿನ ಜಾವ 4 ಗಂಟೆ ಸುವಾರಿಗೆ ಬಾಲಕನು ತನ್ನ ತಾಯಿಯ ತವರು ಮನೆಯಾದ ಈದು ಗ್ರಾಮದ ಪೆಲತಕಟ್ಟೆಯಲ್ಲಿ ಇದ್ದಾಗ ಅಸ್ವಸ್ಥಗೊಂಡಿದ್ದಾನೆ. ತಕ್ಷಣವೇ ಪಾಲಕರು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕ ವಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕಾರ್ಕಳ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net