ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

 ಸುಂದರ ಶೆಟ್ಟಿ
ಸುಂದರ ಶೆಟ್ಟಿ
Published on

ಕಡಬ: ಇಲ್ಲಿನ ರಾಮಕುಂಜ ಗ್ರಾಮದ ಶಾರದಾ ನಗರದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಪತ್ತೆಯಾಗಿದೆ. ಕಡಬ ತಾಲೂಕು ಆಲಂಕಾರು ಗ್ರಾಮದ ಕಿನ್ನಿಗೋಳಿ ನಿವಾಸಿ ಹಲವಾರು ವರ್ಷಗಳಿಂದ ಶಾರದನಗರದ ಮನೆಯಲ್ಲಿ ವಾಸವಾಗಿದ್ದ ಸುಂದರ ಶೆಟ್ಟಿ(75) ಎಂದು ಗುರುತಿಸಲಾಗಿದೆ.

ತಿಂಗಳ ಹಿಂದೆ ಪತ್ನಿ ಬೆಂಗಳೂರಿನ ಪುತ್ರನ ಮನೆಗೆ ತೆರಳಿದ್ದು, ಒಬ್ಬರೇ ಮನೆಯಲ್ಲಿದ್ದರು. ಆ.8ರಂದು ಹಿರಿಯ ಪುತ್ರ ಸೋಮಸುಂದರ ಶೆಟ್ಟಿ ಮನೆಗೆ ಬಂದು ತಂದೆಯ ಯೋಗಕ್ಷೇಮ ವಿಚಾರಿಸಿ ತೆರಳಿದ್ದರು. ಮೂರು ದಿನಗಳಿಂದ ಮನೆ ಬಾಗಿಲು ಮುಚ್ಚಿರುವುದನ್ನು ಗಮನಿಸಿದ ಸ್ಥಳೀಯರು ಗುರುವಾರ ಮನೆ ಹತ್ತಿರ ಹೋದಾಗ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಸೋಮಸುಂದರ ಶೆಟ್ಟಿ ಅವರಿಗೆ ವಿಷಯ ತಿಳಿಸಿ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮನೆ ಬಾಗಿಲು ತೆರೆದು ನೋಡಿದಾಗ ಚಾಪೆಯಲ್ಲಿ ಮಲಗಿದ ಸ್ಥಿತಿಯಲ್ಲಿದ್ದ ಕೊಳೆತ ರೀತಿಯಲ್ಲಿ ಶವ ಪತ್ತೆಯಾಗಿದೆ. ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net