ನೀರುಪಾಲಾಗಿದ್ದವರ ಮೃತದೇಹ ಪತ್ತೆ

 ಬೇಕಲ ಪಳ್ಳಿಕೆರೆ ಬೀಚಲ್ಲಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಅಂಕಿತ್ ಹಾಗೂ ಟಿ.ಅಬ್ರಹಾಂ.
ಬೇಕಲ ಪಳ್ಳಿಕೆರೆ ಬೀಚಲ್ಲಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಅಂಕಿತ್ ಹಾಗೂ ಟಿ.ಅಬ್ರಹಾಂ.
Published on
ಕಾಸರಗೋಡು: ಬೇಕಲಕೋಟೆ ಬಳಿಯ ಪಳ್ಳಿಕೆರೆ ಬೀಚ್‌ನಲ್ಲಿ ಸಮುದ್ರ ಸ್ನಾನದ ವೇಳೆ ನೀರುಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಸೋಮವಾರ ಪತ್ತೆಯಾಗಿದೆ.
ಕೋಟಯಂ ಚಂಗನಾಶ್ಶೇರಿ ನಿವಾಸಿ ಅಪ್ಪು ಟಿ.ಅಬ್ರಹಾಂ(20) ಹಾಗೂ ಸ್ನೇಹಿತ ಅಂಕಿತ್(20) ಮೃತರು. ಅಬ್ರಹಾಂ ಅವರ ಮೃತದೇಹ ಚಿತ್ತಾರಿ ಅಳಿವೆ ಬಾಗಿಲಿನಲ್ಲಿ ಹಾಗೂ ಅಂಕಿತ್ ಮೃತದೇಹ ಮುಟ್ಟುಂದಲ ಅಳಿವೆ ಬಾಗಿಲಿಂದ ನಾಗರಿಕರು ಪತ್ತೆ ಹಚ್ಚಿದ್ದರು. ಇಬ್ಬರ ಮೃತದೇಹಗಳನ್ನು ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ.
ಭಾನುವಾರ ನಾಲ್ವರು ಗೆಳೆಯರು ಜತೆಯಾಗಿ ಸಮುದ್ರಕ್ಕಿಳಿದು ಸ್ನಾನ ಮಾಡುತ್ತಿದ್ದ ವೇಳೆ ಇಬ್ಬರು ಬಲವಾದ ತೆರೆಗೆ ಸಿಲುಕಿ ಸಮುದ್ರ ಪಾಲಾಗಿದ್ದರು. ಸ್ನೇಹಿತರಾದ ಅಲನ್ ಸೋನಿ ಮತ್ತು ಅಲನ್ ದೇವಸ್ಯ ಪ್ರಯಾಸಪಟ್ಟು ದಡ ಸೇರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net