ಬಿ.ಶೇಖರ ಕುಂದರ್ ಮರವಂತೆ ಮತ್ತು ರಾಮಣ್ಣ ಉಪ್ಪುಂದ ಎಂಬುವರು ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ರಕ್ಷಿಸಲು ತಮ್ಮ ಬೋಟುಗಳನ್ನು ನೀಡಿ ವಾನವೀಯತೆ ಮೆರೆದಿದ್ದಾರೆ. ಸ್ಥಳೀಯರಾದ ಅಭಿಷೇಕ ಖಾರ್ವಿ ಮಲ್ಯರಬೆಟ್ಟು, ಚಂದ್ರಶೇಖರ ಖಾರ್ವಿ ಉಪ್ಪುಂದ, ಸಂದೇಶ ಎಸ್. ಮತ್ತು ಈಶ್ವರ ಲೋಕಪ್ಪ ತಾಂಡೇಲ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ರಮೇಶ ಕೆ., ಉಪನಿರೀಕ್ಷಕ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಯೊಂದಿಗೆ ತೆರಳಿ ಮೀನುಗಾರರ ರಕ್ಷಣೆಗೆ ನೆರವಾದರು.