ರಕ್ತದಾನದಿಂದ ಜೀವ ಉಳಿಸಲು ಸಾಧ್ಯ

 ಕೋಟದಲ್ಲಿ ರಕ್ತದಾನ ಶಿಬಿರವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು. ಪ್ರಮುಖರಾದ ರವೀಶ್ ಶ್ರೀಯಾನ್, ರಂಜಿತ್ ಕುಮಾರ್, ಶಿವರಾಮ್ ಕೆ.ಎಂ. ಇದ್ದರು.
ಕೋಟದಲ್ಲಿ ರಕ್ತದಾನ ಶಿಬಿರವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು. ಪ್ರಮುಖರಾದ ರವೀಶ್ ಶ್ರೀಯಾನ್, ರಂಜಿತ್ ಕುಮಾರ್, ಶಿವರಾಮ್ ಕೆ.ಎಂ. ಇದ್ದರು.
Published on
ಕೋಟ: ರಕ್ತಕ್ಕೆ ಪರ್ಯಾಯ ವ್ಯವಸ್ಥೆಗಳಿಲ್ಲ. ಈ ದಿಸೆಯಲ್ಲಿ ರಕ್ತದ ಅವಶ್ಯಕತೆ ಅರಿತು ರಕ್ತದಾನ ಮಾಡಬೇಕು. ಇದರಿಂದ ಒಂದಿಷ್ಟು ಜೀವ ಉಳಿಸಲು ಸಾಧ್ಯವಿದೆ ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಹೇಳಿದರು.
ಕೋಟದಲ್ಲಿ ಭಾನುವಾರ ಕೋಟ ಮೊಗವೀರ ಯುವ ಸಂಟನೆ ಹಾಗೂ ಮಹಿಳಾ ಸಂಟನೆ, ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಮಣೂರು ಪಡುಕರೆ ಗೀತಾನಂದ ಫೌಂಡೇಶನ್, ಮಣಿಪಾಲ ಕೆಎಂಸಿ ಆಸ್ಪತ್ರೆ ರಕ್ತನಿಧಿ ಮತ್ತು ಉಡುಪಿ ಜಿಲ್ಲಾಡಳಿತ ಆಶ್ರಯದಲ್ಲಿ ವಿವಿಧ ಸ್ಥಳೀಯ ಸಂಟನೆಗಳ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮೊಗವೀರ ಯುವ ಸಂಟನೆ ಜಿಲ್ಲಾಧ್ಯಕ್ಷ ರವೀಶ್ ಶ್ರೀಯಾನ್ ಮಾತನಾಡಿದರು. ರಕ್ತದಾನ ಕುರಿತು ಕೆಎಂಸಿ ರಕ್ತನಿಧಿ ವಿಭಾಗದ ಡಾ.ವಿಶ್ವೇಶ ಮಾಹಿತಿ ನೀಡಿದರು. ಕೋಟ ಟಕ ಮೊಗವೀರ ಯುವ ಸಂ ಅಧ್ಯಕ್ಷ ರಂಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿದರು. ಮಾಜಿ ಜಿಲ್ಲಾಧ್ಯಕ್ಷ ಶಿವರಾಮ್ ಕೆ.ಎಂ., ಕೋಟ ಟಕ ಮಾಜಿ ಅಧ್ಯಕ್ಷ ರಮೇಶ್ ವಿ.ಕುಂದರ್, ಬಾರಿಕೆರೆ ಯುವಕ ಮಂಡಲ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ, ವಿನಾಯಕ ಫ್ರೆಂಡ್ಸ್ ಅಧ್ಯಕ್ಷ ಪ್ರಶಾಂತ್ ಮಟಪಾಡಿ, ಮೊಗವೀರ ಮಹಿಳಾ ಟಕ ಅಧ್ಯಕ್ಷೆ ಲಲಿತಾ ಭಾಸ್ಕರ್, ಕೆಎಂಸಿ ರಕ್ತನಿಧಿ ವಿಭಾಗದ ಡಾ.ಸಹನಾ, ಶೇಖರ್ ತೋಳಾರ್ ಮತ್ತಿತರರು ಉಪಸ್ಥಿತರಿದ್ದರು. ರವಿಕಿರಣ್ ಕೋಟ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net