ಅಂಗಾಂಗ ದಾನ ಘೋಷಿಸಿದ ಯಶ್​ಪಾಲ್​ ಸಕಲರಿಗೆ ಮಾದರಿ

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಆರೂರು ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಿದರು. ಬಿ.ಎನ್​. ಶಂಕರ ಪೂಜಾರಿ, ಅನಂತಪದ್ಮನಾಭ ಸಾಮಗ, ಗೋಕುಲದಾಸ್​ ಕಚ್ಚೂರು, ಜಿಲ್ಲಾ ಮರಾಠಿ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ್​, ಮಲ್ಪೆ ದಯಾನಂದ್​ ಕೆ. ಸುವರ್ಣ, ಪ್ರಭಾಕರ್​ ಪೂಜಾರಿ, ಸುಧಾಕರ್​ ಕುಂದರ್​, ಡಾ.ವೀಣಾ, ಶೇಖರ್​ ಶೆಟ್ಟಿ, ಮಟ್ಟು ಯತೀಶ್​ ಕೋಟ್ಯಾನ್​ ಇದ್ದರು.

Published on

* ನಿವೃತ್ತ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ಮೆಚ್ಚುಗೆ 

* ಸುವರ್ಣ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ 

ಉಡುಪಿ: ಯಾವುದೇ ಪ್ರತಿಲದ ಅಪೇಕ್ಷೆಯಿಲ್ಲದೆ ಸಮಾಜಕ್ಕೆ ನಿರಂತರ ಸೇವೆ ಸಲ್ಲಿಸುವ ಮನಸ್ಸುಳ್ಳ ಶಾಸಕ ಯಶ್​ಪಾಲ್​ ಸುವರ್ಣ ಅವರು ಅಂಗಾಂಗ ದಾನದ ನೋಂದಣಿ ಮಾಡಿರುವುದು ಶ್ರೇಷ್ಠ ಕಾರ್ಯವಾಗಿದೆ. ಅವರ ಜನ್ಮದಿನದ ನಿಮಿತ್ತ ಆಯೋಜಿಸಿರುವ ರಕ್ತದಾನ ಶಿಬಿರವು ಸಾಮಾಜಿಕ ಕಳಕಳಿಯ ಹಾಗೂ ಶ್ಲಾಘನೀಯ ಕಾರ್ಯ ಎಂದು ನಿವೃತ್ತ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಪುರಭವನದಲ್ಲಿ ಟೀಮ್​ ಯಶ್​ಪಾಲ್​ ಸುವರ್ಣ ಉಡುಪಿ ತಂಡದ ನೇತೃತ್ವದಲ್ಲಿ ಶಾಸಕ ಯಶ್​ಪಾಲ್​ ಸುವರ್ಣ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಬಿ.ಎನ್​. ಶಂಕರ್​ ಪೂಜಾರಿ ಮಾತನಾಡಿ, ತನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುತ್ತಿರುವ ಶಾಸಕ ಯಶ್​ಪಾಲ್​ ಅವರ ಸೇವಾ ಮನೋಭಾವ ಮೆಚ್ಚುವಂತದ್ದು. ಅವರ ಭವಿಷ್ಯ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.

ಸಗ್ರಿಯ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಅನಂತಪದ್ಮನಾಭ ಸಾಮಗ ಮಾತನಾಡಿದರು. 

ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಗೋಕುಲದಾಸ್​ ಕಚ್ಚೂರು, ಜಿಲ್ಲಾ ಮರಾಠಿ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ್​, ಮಲ್ಪೆ ಮತ್ಸ್ಯೋದ್ಯಮಿ ದಯಾನಂದ್​ ಕೆ. ಸುವರ್ಣ, ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಉದ್ಯಮಿ ಸುಧಾಕರ್​ ಕುಂದರ್​, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾ.ವೀಣಾ, ಟೀಮ್​ ಯಶ್​ಪಾಲ್​ ಸುವರ್ಣ ಉಡುಪಿಯ ಸಂಚಾಲಕ ಶೇಖರ್​ ಶೆಟ್ಟಿ ಹಿರಿಯಡ್ಕ ಉಪಸ್ಥಿತರಿದ್ದರು.

ಮಟ್ಟು ಯತೀಶ್​ ಕೋಟ್ಯಾನ್​ ಸ್ವಾಗತಿಸಿದರು. ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 215 ಯೂನಿಟ್​ ರಕ್ತ ಸಂಗ್ರಹಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net